ಇಂಚಾನ್‌: ಏಶ್ಯಾಡ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಗುರುವಾರ ಸಿಹಿ-ಕಹಿಯ ಸಮ ಪಾಕ. ಮಹಿಳಾ ಸಿಂಗಲ್ಸ್‌ನಲ್ಲಿ ಗೆದ್ದ ಸೈನಾ ನೆಹ್ವಾಲ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟರೆ, ಪಿ.ವಿ. ಸಿಂಧು ಸೋಲುಂಡು ನಿರ್ಗಮಿಸಿದ್ದಾರೆ.

ಮಹಿಳಾ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಸೈನಾ ನೆಹ್ವಾಲ್‌ 21-7, 21-6ರಿಂದ ಇರಾನ್‌ನ ಸೊರಾಯ ಅಗಾಹಿಹಾಜಿಯಾ ಅವರನ್ನು ಸೋಲಿಸಿದರು. ಸೈನಾ ಹಾಗೂ ಇರಾನ್‌ ಆಟಗಾರ್ತಿ ನಡುವಿನ ಹೋರಾಟ ಏಕ ಪಕ್ಷೀಯವಾಗಿತ್ತು. ವಿಶ್ವದ 7ನೇ ರ್‍ಯಾಂಕ್‌ ಹೊಂದಿರುವ ಸೈನಾ ಮನಸೋ ಇಚ್ಛೆ ರ್ಯಾಕೆಟ್‌ ಬೀಸಿದರು. ಮೊದಲ ಗೇಮ್‌ ಅನ್ನು 21-7ರಿಂದ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲೂ ಅವರಿಂದ ಅದೇ ಆಟ ಹೊರಹೊಮ್ಮಿತು. ಇದನ್ನು 21-6ರಿಂದ ತಮ್ಮದಾಗಿಸಿಕೊಂಡರು.

sehna

 

ಸಿಂಧು ನಿರಾಸೆ, ಕಶ್ಯಪ್‌ ಜಯ

ಸಿಂಗಲ್ಸ್‌ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಪಿ.ವಿ. ಸಿಂಧು 16-21, 20-22ರಿಂದ ಇಂಡೋನೇಶ್ಯಾದ ಬೆಲಾಟ್ರಿಕ್ಸ್‌ ಮನ್ಯುಪ್ಯುಟಿ ವಿರುದ್ಧ ಸೋಲು ಕಂಡರು.

ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಪಾರುಪಳ್ಳಿ ಕಶ್ಯಪ್‌ ಪುರುಷರ ಸಿಂಗಲ್ಸ್‌ನಲ್ಲಿ 21-6, 21-6 ಸುಲಭ ಅಂತರದಿಂದ ಅಫ್ಘಾನಿಸ್ಥಾನದ ಇಕ್ಬಾಲ್‌ ಅಹ್ಮದ್‌ ಶಕೀಬ್‌ ವಿರುದ್ಧ ಗೆಲುವು ಒಲಿಸಿಕೊಂಡರು. ಸುಮಿತ್‌ ರೆಡ್ಡಿ ಹಾಗೂ ಮನು ಅತ್ರಿ ಅವರನ್ನೊಳಗೊಂಡ ಪುರುಷರ ಡಬಲ್ಸ್‌ ತಂಡ ಗೆಲುವು ಸಾಧಿಸಿ ಕ್ವಾರ್ಟಟ್‌ ಫೈನಲ್‌ಗೇರಿದರೆ, ಮಿಶ್ರ ಡಬಲ್ಸ್‌ನಲ್ಲಿ ಅಕ್ಷಯ್‌ ದೇವಾಲ್ಕರ್‌ ಹಾಗೂ ಪ್ರದ್ನಾé ಗಾದ್ರೆ ಜೋಡಿ ಸೋಲು ಕಂಡಿದೆ.

PVSindhu_EPS

By suddi9

Leave a Reply

Your email address will not be published. Required fields are marked *