ಸುದ್ದಿ9 ಸುರತ್ಕಲ್:ಸುರತ್ಕಲ್ ಬಳಿಯ ಕುಳಾಯಿಯಲ್ಲಿ ಪಿ. ಸಂತೋಷ್ ಐತಾಳ್ ಎಂಬವರ ಕಚೇರಿಗೆ ಸೆ.25ರಂದು ಗುರುವಾರ ತಡ ರಾತ್ರಿ ಕಳ್ಳರು ನುಗ್ಗಿ ವಿಪಲರಾದ ಘಟನೆ ನಡೆದಿದೆ. ರಾತ್ರಿ ಕಳ್ಳರು ಕಚೇರಿಯ ಕಪಾಟುಗಳನ್ನು ಜಾಲಾಡಿ ಕಳ್ಳತನ ಮಾಡಲು ಯತ್ನಿಸಿದ್ದಾರೆ ಎನು ಸಿಕ್ಕದ ಕಾರಣ ಕಳ್ಳರು ಪಕ್ಕದ ಮನೆಯ ಸದಾಶಿವ ಮಯ್ಯ ಎಂಬವರ ಮನೆ ಬಳಿಯ ಶೆಡ್ನ ಬೀಗ ಮುರಿದಿದಾರೆ. ಆದರೆ ಬೆಲೆೆಬಾಳುವ ವಸ್ತುಗಳು ಕಳ್ಳರಿಗೆ ಸಿಕ್ಕಿಲ್ಲ ಎನ್ನಲಾಗಿದೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

