ಶ್ರೀನಿವಾಸಪುರ: ಸಮಾಜ ಮುಖಿಯಾಗಿ ಕಾರ್ಯನಿರ್ವಹಸಿಸುವ ಸರ್ಕಾರಿ ನೌಕರರು ನಿವೃತ್ತಿ ಬಳಿಕವೂ ಜನರ ಗೌರವಕ್ಕೆ ಪಾತ್ರರಾಗುತ್ತಾರೆ. ಸರ್ಕಾರಿ ಕೆಲಸ ಜನರ ಕೆಲಸ ಎಂಬ ಭಾವನೆಯಿಂದ ದುಡಿದವರು ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯುತ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಎನ್.ರಾಜಣ್ಣ ಹೇಳಿದರು.

ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ನಿವೃತ್ತರಾದ ಎಂ.ಕೆ.ಮೂರ್ತಿ ಅವರನ್ನು ಸನ್ಮಾನಿಸಿ ಮಾತನಾಡಿ, ಎಂ.ಕೆ.ಮೂರ್ತಿ ಅವರು ಶಿಸ್ತಿನ ಸಿಪಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದರು. ಎಂದು ಅವರು ತಮ್ಮ ಕರ್ತವ್ಯದ ಬಗ್ಗೆ ಅಸಡ್ಡೆ ತೊರಿಲ್ಲ. ಅವರ ಮಾದರಿ ಕಾರ್ಯ ಜನರಿಗೆ ಪ್ರಿಯವಾಗಿತ್ತು ಎಂದು ಹೇಳಿದರು.ಈ ಸಂದರ್ಭದಲ್ಲಿ ಬೇರೆಡೆಗೆ ವರ್ಗವಾದ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ರಾಜೇಂದ್ರ ಕನ್ನೇಗೌಡ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಕಚೇರಿ ಸಿಬ್ಬಂದಿ ಕೆ.ಕೆ.ವೆಂಕಟರವಣಪ್ಪ, ಲಕ್ಷ್ಮಿ, ನರಸಿಂಹಪ್ಪ, ಸುರೇಶ್, ಅಜಯ್, ರಾಜೇಶ್, ರಘು ಇದ್ದರು
