ಬಂಟ್ವಾಳ: ಹಾಲೆ ಮರದ ಕೆತ್ತೆಯ ಕಷಾಯವನ್ನು ಆಟಿ ಅಮಾವಾಸ್ಯೆ ದಿನ ಕುಡಿಯುವುದು ವಾಡಿಕೆ. ಪಾಲೆದ ಕೆತ್ತೆ ಎಂದು ಆಡುಭಾಷೆಯಲ್ಲಿ ಇದಕ್ಕೆ ಹೇಳುತ್ತಾರೆ. ಹೀಗಾಗಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಸಹಕಾರದೊಂದಿಗೆ ಸಾರ್ವಜನಿಕರಿಗೆ ಪಾಲೆದ ಕೆತ್ತೆ ಕಷಾಯವನ್ನು ತುಳುಕೂಟ ಬಂಟ್ವಾಳ ವಿತರಿಸಲಿದೆ ಎಂದು ಅದರ ಅಧ್ಯಕ್ಷ ಸುದರ್ಶನ ಜೈನ್ ತಿಳಿಸಿದ್ದಾರೆ. ಆಗಸ್ಟ್ 1ರಂದು ಬೆಳಗ್ಗೆ 6.30ರಿಂದ 7.30ರವರೆಗೆ ಈ ಕಾರ್ಯಕ್ರಮ ದೇವಸ್ಥಾನದ ಮುಂಭಾಗ ನಡೆಯಲಿದೆ, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಜೈನ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *