ಮೂಡುಬಿದಿರೆ: ನೃತ್ಯದಲ್ಲಿ ೩ ವಿಶ್ವ ದಾಖಲೆಗಳನ್ನು ಮಾಡಿದ ರೆಮೋನಾ ಇವೆಟ್ ಪಿರೇರಾ ಅವರ ಸರಣಿ ನೃತ್ಯ ಕಾರ್ಯಕ್ರಮ ರೆಮೊನಾ ಕಲಾ ಯಾನದ ನಾಲ್ಕು ಕಾರ್ಯಕ್ರಮಗಳು ಮೂಡುಬಿದಿರೆ ಸುತ್ತಮುತ್ತ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಬೆಳಗ್ಗೆ ಕೆಸರ್‌ಗದ್ದೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಬಾಬೂ ರಾಜೇಂದ್ರ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಸಂಪ್ರದಾಯದಂತೆ ಪ್ರತಿ ಕಾರ್ಯಕ್ರಮದಲ್ಲಿ ಬಾಲ ಕಲಾವಿದರನ್ನು ಗೌರವಿಸಲಾಗುತ್ತಿದ್ದು ಅಯನಾ.ವಿ. ರಮಣ್, ಆರಾಧನಾ ಭಟ್, ಹರ್ಷಿತಾ ಶಿರೂರು ಮತ್ತು ನಿಹಾರಿಕಾ ಬಿ.ಎನ್ ಮಂಗಳೂರು ಇವರನ್ನು ಗೌರವಿಸಲಾಗುತ್ತಿದೆ. ಗೌರವ ಸ್ವೀಕರಿಸಿದ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿರುವರು.
ಹೂಲಾ ಹೂಪ್‌ನಲ್ಲಿ ವಿಶ್ವ ದಾಖಲೆ ಬರೆದಿರುವ ಆದ್ಯ ಎ. ಮಂಗಳೂರು ಮತ್ತು ನ್ಯಾಶನಲ್ ಟ್ಯಾಲೆಂಟೆಡ್ ಡ್ಯಾನ್ಸರ್ ಆಪಾರ್ಡ್ ಪುರಸ್ಕೃತೆ ಶೃಜನ್ಯ ಜೆ. ಕೆ. ಹೋಮಲ್ಕೆ ಅವರು ನಾಲ್ಕು ಕಾರ್ಯಕ್ರಮಗಳನ್ನು ಆಹ್ವಾನಿತ ಕಲಾವಿದರಾಗಿ ಕಾರ್ಯಕ್ರಮ ನೀಡುವರು. ಅಜೆಕಾರಿನ ಸರ್ಕಾರಿ ಮಾದರಿ ಶಾಲೆಯಿಂದ ಆರಂಭ ಆಗಿರುವ ಈ ಕಾರ್ಯಕ್ರಮ ೬ ಶಾಲೆಗಳಲ್ಲಿ ನಡೆದಿದೆ. ವಿದ್ಯಾರ್ಥಿಗಳಲ್ಲಿ ಕಲೆ ಸಂಸ್ಕೃತಿಯ ಬಗೆಗೆ ಅರಿವು ಮೂಡಿಸಿ ಅವರಿಗೆ ಸ್ಫೂರ್ತಿ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
