ಕೈಕಂಬ : ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ(ಮುಂಡಿತ್ತಾಯ) ಧೂಮಾವತಿ ದೈವಸ್ಥಾನದ ಭಂಡಾರದ ಮನೆಗೆ(ಬದಿನ ಮನೆ) ಸೇರಿದ ನಾಲ್ಕು ಎಕ್ರೆ ಭತ್ತದ ಗದ್ದೆಯಲ್ಲಿ ಶುಕ್ರವಾರ ಸಾಂಪ್ರದಾಯಿಕ ನಾಟಿಗಾಗಿ ನೇಜಿ ತೆಗೆಯುವ ಹಾಗೂ ಗದ್ದೆ ಉಳುಮೆ ಕಾರ್ಯ ಆರಂಭಗೊಂಡಿತು.

gur-july-5-naati-1ಮುಂಡಿತ್ತಾಯ ದೈವ ಪಾತ್ರಿಯಾಗಿರುವ ಭಂಡಾರದ ಮನೆಯ ತಿಮ್ಮ ಪೂಜಾರಿ ಯಾನೆ ಚಂದ್ರಹಾಸ ಕೌಡೂರು(ಅಡ್ವಕೇಟ್) ಮುಂದಾಳತ್ವದಲ್ಲಿ ದೈವಸ್ಥಾನದ ಪಕ್ಕದಲ್ಲಿರುವ `ದೊಂಪದ ಬಲಿ’ ಗದ್ದೆಯಲ್ಲಿ ಕುಡುಬಿ ಮಹಿಳೆಯರು ನೇಜಿ ಕೀಳುತ್ತಿದ್ದು, ಪಕ್ಕದಲ್ಲಿ ನಾಟಿಗಾಗಿ ಟಿಲ್ಲರಿನಲ್ಲಿ ಉಳುಮೆ ಕಾರ್ಯ ನಡೆಯಿತು. ಈ ಗದ್ದೆಯಲ್ಲಿ ಸಂಪ್ರದಾಯದಂತೆ ನೇಜಿ ನೆಡುವ ಕಾರ್ಯ ನಡೆಯಲಿದ್ದು, ಈ ಸಂದರ್ಭದಲ್ಲಿ ಚಂದ್ರಹಾಸರೊಂದಿಗೆ ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಪದ್ಮನಾಭ ಪೂಜಾರಿ, ನಾರಾಯಣ ಪೂಜಾರಿ ಹಾಗೂ ಹಸನಬ್ಬ ಬ್ಯಾರಿ, ಪ್ರಶಾಂತ್ ಮುಂಡ ಇದ್ದರು.gur-july-5-tiller ulume-1

By suddi9

Leave a Reply

Your email address will not be published. Required fields are marked *