ಸುದ್ದಿ9ಉಡುಪಿ: ಜಿಲ್ಲಾ ಪೊಲೀಸ್ ನೌಕರರ ಸಹಕಾರಿ ಸಂಘದ ನಿದರ್ೆಶಕರ ಮಂಡಳಿಯ 4ನೇ ಸಭೆಯು ಶನಿವಾರರಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಅದ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆಯಿತು.

ಸಂಘದ ಉಪಾಧ್ಯಕ್ಷ ಡಾ.ಪ್ರಭುದೇವ. ಬಿ.ಮಾನೆ, ಸಂಘದ ಸಲಹೆಗಾರ ಎಸ್ಸಿಡಿಸಿಸಿ ಬ್ಯಾಂಕ್ ನಿವೃತ್ತ ಎಜಿಎಂ ಬಾಬುರಾಜ ಪೈ, ಪೊಲೀಸ್ ನಿರೀಕ್ಷಕ ಜೈ ಶಂಕರ್ ಹಾಗೂ ಕೆ.ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು. ಸಂಘದ ಖಾಸಗಿ ಕಾರ್ಯದಶರ್ಿ ಶ್ರವಣ್ ಕುಮಾರ್ ಸಂಘದ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿ ಸವರ್ಾನುಮತದ ಅನುಮೋದನೆಯನ್ನು ಪಡೆದರು.

ಸಂಘದಲ್ಲಿ ಇದುವರೆಗೆ 45 ಮಂದಿ ಸದಸ್ಯರಿಗೆ ಒಟ್ಟು ರೂಪಾಯಿ 11.20 ಲಕ್ಷ ರೂ. ಸಾಲವನ್ನು ಮಂಜೂರು ಮಾಡಲಾಗಿದ್ದು ಇಂದಿನ ಸಭೆಯಲ್ಲಿ 5 ಮಂದಿಗೆ ತಲಾ 25 ಸಾವಿರ ರೂ.ನಂತೆ ಸಾಲ ಮಂಜೂರು ಮಾಡಲಾಯಿತು. ಇಲ್ಲಿಯವರೆಗೆ ಒಟ್ಟು 50 ಮಂದಿಗೆ ಒಟ್ಟು 12.25 ಲಕ್ಷ ರೂಪಾಯಿ ಸಾಲವನ್ನು ನೀಡಲಾಗಿದೆ.

ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೆಟೀವ್ ಸೊಸೈಟಿ ಇದರ ವತಿಯಿಂದ ಸಂಘಕ್ಕೆ ಉದಾರ ಕೊಡುಗೆಯಾಗಿ ಕಂಪ್ಯೂಟರ್ ಉಪಕರಣ ಒದಗಿಸಲು ಕಾರಣರಾದ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿಯವರನ್ನು ಸಂಘದ ವತಿಯಿಂದ ಸನ್ಮಾನಿಸುವುದೆಂದು ತೀಮರ್ಾನಿಸಲಾಯಿತು.

ಇತರ ಇಲಾಖೆಗಳ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಒಂದು ವರ್ಷದ ಅವಧಿಗೆ 10% ಬಡ್ಡಿ ದರದಲ್ಲಿ ಠೇವಣಿ ಸಂಗ್ರಹಿಸುವುದೆಂದು ಹಾಗೂ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಂಘದ ನಿಯಮದಂತೆ ಸದಸ್ಯರನ್ನಾಗಿ ಮಾಡುವುದೆಂದು ನಿರ್ಧರಿಸಲಾಯಿತು. ನಿದರ್ೇಶಕರ ಮಂಡಳಿಯ ಕಾರ್ಯದಶರ್ಿ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ನಿರೀಕ್ಷಕ ಉಮೇಶ್ ಪಿ. ಸ್ವಾಗತಿಸಿದರು. ನಿದರ್ೆಶಕ ಬಿ.ಮನಮೋಹನ್ ರಾವ್ ವಂದಿಸಿದರು.

 

888p

By suddi9

Leave a Reply

Your email address will not be published. Required fields are marked *