ಬಂಟ್ವಾಳ : ಕರ್ನಾಟಕ ತೆಂಗು ಬೆಳೆಗಾರರ ಸೌಹಾರ್ಧ ಸಹಕಾರಿ ಬಿ.ಸಿ.ರೋಡ್ ಇದರ ಮಾಸಿಕ ಸಭೆ ಜೂ. 30ರಂದು ಬಿ.ಸಿ.ರೋಡ್ ಕಚೇರಿಯಲ್ಲಿ ಸಂಘದ ಅಧ್ಯಕ್ಷ ರಾಜಾ ಬಂಟ್ವಾಳ ನೇತೃತ್ವದಲ್ಲಿ ನಡೆಯಿತು.ತೆಂಗು ಬೆಳೆ ಅಭಿವೃದ್ದಿ, ಹುಟ್ಟುವಳಿ ಹೆಚ್ಚಿಸುವುದು, ಆರ್ಥಿಕ ವ್ಯವಹಾರ, ಸಹಕಾರಿಯು ಠೇವಣಿ ಸಂಗ್ರಹಿಸುವುದು, ಸರಕಾರದ ವಿವಿಧ ಕೃಷಿ ಪರ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ಬಗ್ಗೆ ಸಮಗ್ರ ಚರ್ಚೆಯನ್ನು ನಿರ್ದೇಶಕರು ಮಾಡಿದರು.

3006btrbph4
ಮಳೆಗಾಲದಲ್ಲಿ ತೋಟಗಾರಿಕಾ ಕೃಷಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗೃತೆ, ಫಸಲನ್ನು ಉಳಿಸಿಕೊಳ್ಳಲು ಮಾಡಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಂಘದ ಉಪಾಧ್ಯಕ್ಷ ಜಯಾನಂದ ಪೆರಾಜೆ ಮಾತನಾಡಿ ಸಂಘವು ರೈತಾಪಿ ವರ್ಗದ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಅವಶ್ಯ ಇದ್ದಾಗ ರೈತರಿಗೆ ಉಚಿತ ನೀಡುವ ಬದ್ದತೆ ಹೊಂದಿರಬೇಕು. ಲೆಕ್ಕಪತ್ರದಲ್ಲಿ ಪಾರದರ್ಶಕ ಕ್ರಮ ಅನುಸರಿಸಿ ಎಂದು ಸಿಬಂದಿಗಳಿಗೆ ಸೂಚನೆ ನೀಡಿದರು.

ನಿರ್ದೇಶಕರಾದ ಸದಾಶಿವ ಬಂಗುಲೆ, ನಾರಾಯಣ ದರ್ಖಾಸು, ವಿಠಲ ಸಪಲ್ಯ, ನವೀನ್ ಭಂಡಾರಿ, ಮೋಹನ ದರ್ಖಾಸು, ನಾಗೇಶ ಕಲ್ಯಾರು, ನಾಮ ನಿರ್ದೇಶನ ಸದಸ್ಯರಾದ ಪ್ರೇಮನಾಥ ಶೆಟ್ಟಿ ಅಂತರ, ಶರಣಪ್ಪ ಉಮರಗಿ ಉಪಸ್ಥಿತರಿದ್ದು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು.ಅಧ್ಯಕ್ಷರು ಸ್ವಾಗತಿಸಿ, ನಿರ್ದೇಶಕಿ ಅಂಬಿಕಾಅನ್ನಪೂರ್ಣ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾ„ಕಾರಿ ಪವಿತ್ರ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *