ಉಡುಪಿ: ಹಿರಿಯ ಪತ್ರಿಕೋದ್ಯಮಿ ಉದಯವಾಣಿ ಸಮೂಹದ ರೂವಾರಿ ಟಿ.ಸತೀಶ ಯು ಪೈ ಅವರ ಸುದೀರ್ಘ ಮಾಧ್ಯಮ ಸೇವೆಗಾಗಿ ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುವ ೨೦೧೯ ರ ರಾಜ್ಯಮಟ್ಟದ ಪತ್ರಿಕಾ ದಿನದ ಗೌರವವನ್ನು ಅವರ ಮಣಿಪಾಲ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರದಾನಿಸಿದರು.
ಮಾಧ್ಯಮ ಸಂಸ್ಥೆಯನ್ನು ಕಟ್ಟಿ ಮುನ್ನಡೆಸುವ ಗುರುತರ ಜವಬ್ದಾರಿಯನ್ನು ನಿರ್ವಹಿಸಿ ಯಶಸ್ವಿ ಪತ್ರಿಕೋದ್ಯಮಿಯಾಗಿ ಇಂದಿಗೂ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿರುವುದು ಪ್ರಶಂಸಾರ್ಹ ವಿಚಾರ. ಅಲ್ಲದೆ ನ್ಯಾಯಾಲಯಗಳು ವಾದ ವಿವಾದಗಳನ್ನು ಪರಿಗಣಿಸಿ ತೀರ್ಮಾನ ಕೊಟ್ಟರೆ, ಪತ್ರಿಕೆ ಜನರ ನಡುವೆ ಹೋಗಿ ಸತ್ಯಾಂಶಗಳನ್ನು ಪರಿಶೀಲಿಸಿ ಜನ ಪರ ತೀರ್ಪು ನೀಡುವ ಕೆಲಸ ಮಾಡುತ್ತಾ ಬಂದಿದೆ ಎಂದು ಪುನರೂರು ಅವರು ಅಭಿಪ್ರಾಯ ಪಟ್ಟರು.AM_R2129

ಮೂರು ತಿಂಗಳಿಗಿಂತ ಹೆಚ್ಚು ಕಾಲ ನಮ್ಮ ಪತ್ರಿಕೆ ಬದುಕುವುದಿಲ್ಲ ಎಂದು ಕೆಲವರು ಹೇಳಿದ್ದರು. ಓದುಗರ, ತಂತ್ರಜ್ಞರ, ಅಂದಿನಿಂದ ಇಂದಿನವರೆಗೆ ದುಡಿದ ನಿಷ್ಠಾವಂತರಿಂದ ಉದಯವಾಣಿ ಇಂದು ಸುವರ್ಣ ಸಂಭ್ರಮವನ್ನು ಕಾಣುತ್ತಿದೆ ಎಂದು ಸತೀಶ.ಯು ಪೈ ಅವರು ಹೇಳಿದರು.ಮದುವೆಯಾಗಿ ಬಂದ ಆರಂಭದ ದಿನಗಳಲ್ಲಿ ಹೊತ್ತಲ್ಲಿ ರಾತ್ರಿ ಹಗಲು ಪತ್ರಿಕೆಯ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ ಸತೀಶ್ ಪೈ ಅವರು ಅವರ ಕೆಲಸದಲ್ಲಿ ಬಹಳ ತೊಡಗಿಕೊಳ್ಳುತ್ತಿದ್ದರು, ಪತ್ರಕರ್ತರ ವೇದಿಕೆ ಹೀಗೆ ಅವರನ್ನು ಸ್ವಗೃಹದಲ್ಲಿ ಸನ್ಮಾನಿಸುತ್ತಿರುವುದು ವಿಶೇಷವಾಗಿದೆ ಎಂದು ತರಂಗ ಸಂಪಾದಕಿ ಸಂಧ್ಯಾ ಪೈ ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ಕರಾವಳಿಗೆ ನ್ಯಾಯ ಒದಗಿಸುವ ಒಂದು ತುಳು ಅಥವಾ ಬಹುಭಾಷಾ ಚ್ಯಾನಲ್ ಮತ್ತು ತುಳು ದೈನಿಕ ಪತ್ರಿಕೆಗಳನ್ನು ಆರಂಭಿಸಲು ಸಾಧ್ಯವಾಗಬೇಕು ಎಂದು ಹೇಳಿದರುಮುಖ್ಯ ಅತಿಥಿಗಳಾಗಿದ್ದ ಶಿಕ್ಷಣ ತಜ್ಞ ಎ. ನರಸಿಂಹ ಬೊಮ್ಮರ ಬೆಟ್ಟು, ಸಂಗೀತಜ್ಞ ಉಡುಪಿ ವಾಸುದೇವ ಭಟ್, ಉದ್ಯಮಿ ವಿಶ್ವನಾಥ ಶೆಣೈ ಉಡುಪಿ, ಪುಸ್ತಕ ಪರಿವ್ರಾಜಕ ಕು.ಗೋ, ಕಲಾವಿದ  ಪಿ.ಎನ್ ಆಚಾರ್ಯ ನುಡಿ ಗೌರವ ಸಲ್ಲಿಸಿದರು.

ತಂತ್ರಜ್ಞ  ಶ್ರೀನಿವಾಸ ಶೆಟ್ಟಿಗಾರ ಅವರನ್ನು ಸತೀಶ ಪೈ ಅವರು ಗೌರವಿಸಿದರು. ಆಳ್ವಾಸ್ ನ್ಯೂಸಿಯಂನ ಕಾರ್ಡಿನೇಟರ್ ಶ್ರೀಕರ್ ಎಲ್ ಭಂಡಾರ್‌ಕಾರ್, ಕಾದಂಬರಿಕಾರ ಪಿ.ವಿ ಪ್ರದೀಪ್ ಕುಮಾರ್, ನರಸಿಂಹ ಮೂರ್ತಿ, ಪ್ರಶಾಂತ್ ಪೈ, ಸೌಮ್ಯಶ್ರೀ ಎಸ್.ಅಜೆಕಾರ್, ಮೊದಲಾದವರು ಉಪಸ್ಥಿತರಿದ್ದರು.ಸುನಿಜ ಮತ್ತು ಸುನಿಧಿ ಪ್ರಾರ್ಥಿಸಿದರು. ಸಮಾಜ ಸೇವಕ ಭುವನಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ರಾಘವೇಂದ್ರ ಕರ್ವಾಲೋ ವಂದಿಸಿದರು.

By suddi9

Leave a Reply

Your email address will not be published. Required fields are marked *