ಬಂಟ್ವಾಳ:ಕೇಂದ್ರ ಸಕರ್ಾರದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಸ್ವಚ್ಛಮೇವ ಜಯತೇ’ ಎಂಬ ಘೋಷವಾಕ್ಯದ ಮೂಲಕ ಆಂದೋಲನ ನಡೆಸುವಲ್ಲಿ ವಿದ್ಯಾಥರ್ಿಗಳನ್ನು ಕೂಡಾ ತೊಡಗಿಸಿಕೊಂಡಾಗ ಅವರಲ್ಲಿ ಬಾಲ್ಯದಿಂದಲೇ ಸ್ವಚ್ಛತೆ ಬಗ್ಗೆ ಅರಿವು ಮೂಡುತ್ತದೆ ಎಂದು ಸಿದ್ಧಕಟ್ಟೆ ಗುಣಶ್ರೀ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಇಲ್ಲಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವತಿಯಿಂದ ಸಿದ್ಧಕಟ್ಟೆಯಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಚ್ಛಮೇವ ಜಯತೇ ಆಂದೋಲನ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.29btl-Jatha
ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜೊತೆಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.

29btl-Gunashri
ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ಗ್ರಾಮ ಪಂಚಾಯಿತಿ ಸದಸ್ಯರಾದ ಲಿಂಗಪ್ಪ ಪೂಜಾರಿ, ಸುಧಾಕರ ಶೆಟ್ಟಿ, ಸುಧೀಂದ್ರ ಶೆಟ್ಟಿ, ಯೋಗೀಶ ಆಚಾರ್ಯ, ಬೇಬಿ, ರತ್ನಾ, ಪಿಡಿಒ ಗಣೇಶ ಶೆಟ್ಟಿಗಾರ್, ಶಾಲಾ ಟ್ರಸ್ಟಿ ವಿಜಯ ಕುಮಾರ್ ಚೌಟ, ಮುಖ್ಯಶಿಕ್ಷಕಿ ಸಬಿತಾ ಲವಿನಾ ಪಿಂಟೊ, ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ ಬಂಗೇರ ಮತ್ತಿತರರು ಇದ್ದರು.
ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ವಿದ್ಯಾಥರ್ಿಗಳು ಕಲ್ಕುರಿಪದವು-ಸಿದ್ಧಕಟ್ಟೆ ಜಂಕ್ಷನ್ ನಡುವೆ ಜಾಥಾ ನಡೆಸಿ ಘೋಷಣೆ ಕೂಗುವ ಮೂಲಕ ಗಮನ ಸೆಳೆದರು. ಇದೇ ವೇಳೆ ಸಿದ್ಧಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ವಿದ್ಯಾಥರ್ಿಗಳಿಗೆ ಸಂಘದ ಕಾರ್ಯದಶರ್ಿ ರತ್ನಕುಮಾರ್ ಚೌಟ ಸಿಹಿತಿಂಡಿ ವಿತರಿಸಿದರು.

By suddi9

Leave a Reply

Your email address will not be published. Required fields are marked *