ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಇದರ ಸಹಕಾರದೊಂದಿಗೆ  ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೆಲ್ತ್ ಕ್ಲಬ್ ನ ವತಿಯಿಂದ sಸ್ವಚ್ಛ ಮನಸ್ಸು ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಮಾರಿ ಚೈತ್ರಾ ಅವರು ಸ್ವಚ್ಛ ಪರಿಸರದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು. ಕುಮಾರಿ ಅಖಿಲಾ ಅವರು ಸಹಕರಿಸಿದರು.

WhatsApp Image 2019-06-28 at 12.56.36 PMವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಉಪಪ್ರಾಂಶುಪಾಲೆ ಶಾಲಿನಿ ನೊಂಡಾ ವಿದ್ಯಾರ್ಥಿಗಳು ಸ್ವಚ್ಛತೆಯ ಕಡೆ ಗಮನ ಹರಿಸಬೇಕೆಂದು ತಿಳಿಸಿದರು. ಹೆಲ್ತ್ ಕ್ಲಬ್ ನ ಸಂಯೋಜಕಿ ಶ್ರೀಮತಿ ಝಕಿಯಾ ಹಾಗೂ ಇತರ ಸದಸ್ಯರು ಹಾಜರಿದ್ದರು. ವಿದ್ಯಾರ್ಥಿನಿಯರಾದ ಅಪೂರ್ವ ಭಟ್ , ಮನಸ್ವಿ, ಅನಘ್ರ್ಯ, ಶ್ರದ್ಧಾಲಕ್ಷ್ಮಿ ಪ್ರಾರ್ಥನೆ ಗೈದರು. ರಿಷಿಬಾ ಸ್ವಾಗತಿಸಿ ಅನುನಯಾ ವಂದಿಸಿದರು. ಅನನ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *