ಬಂಟ್ವಾಳ: ಸಜಿಪಮೂಡ ಗ್ರಾಮದ ಸಂಕೇಶ ಎಂಬಲ್ಲಿರುವ ನಡಿಯೇಲು ದೈಯಂಗಳು ಉಳ್ಳಾಲ್ತಿ ಅಮ್ಮ ಮತ್ತು ನಾಲ್ಕೈತ್ತಾಯ ದೈವಗಳ ಭಂಡಾರದ ಮನೆಯ ನೂತನ ಗೋಪುರ ನಿರ್ಮಾಣಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಲಾಯಿತು. ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಜೀಪ ಮಾಗಣೆಗೆ ಸಂಬಂಧಿಸಿದ ಈ ಗೋಪುರಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೇರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮಾಜಿ.ಜಿ.ಪಂ.ಆದ್ಯಕ್ಷ ಬಿ. ಸದಾನಂದ ಪೂಂಜಾ , ಅವರು ಉದ್ಘಾಟಿಸಿ,. ಮಾತನಾಡಿ ದ.ಕ.ಜಿಲ್ಲೆಯ ಲ್ಲಿ ಆರಾಧಿಸಲ್ಪಡುವ ಅನೇಕ ಕ್ಷೇತ್ರಗಳ ಪೈಕಿ ಸಜೀಪ ಮೂಡದ ಸಂಕೇಶ ಭಂಡಾರ ಮನೆಯಲ್ಲಿ ಅರಾಧಿಸುವ ಉಳ್ಳಾಲ್ತಿ ಕ್ಷೇತ್ರ ವೈಶಿಷ್ಟ್ಯ ತೆಯನ್ನು ಹೊಂದಿದೆ ಎಂದು ಅವರು ಹೇಳಿದರು.

ಗಡಿ ಪ್ರಧಾನರಾದ ಕಾಂತಾಡಿಗುತ್ತು ಬರಂಗರೆ ಗಣೇಶ ನಾಯ್ಕ್ ಯಾನೆ ಉಗ್ಗಶೆಟ್ಟಿ, ಸಜೀಪ ಗುತ್ತು ಗಡಿ ಪ್ರಧಾನ ರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ, ಜೀರ್ಣೋದ್ಧಾರ ಸಮಿತಿ ಯ ಕಾರ್ಯಧ್ಯಕ್ಷ ಶ್ರೀ ಕಾಂತ ಶೆಟ್ಟಿ, ಸಂಕೇಶ , ಪ್ರಮುಖರಾದ ಸುಬ್ರಹ್ಮಣ್ಯ ಭಟ್, ವೆಂಕಟೇಶ್ ಬಟ್, ಜಯಶಂಕರ ಬಾಸ್ರಿತ್ತಾಯ, ನಗ್ರಿಗುತ್ತು ಜಯರಾಮ ಶೆಟ್ಟಿ, ಸಂಕಪ್ಪ ಶೆಟ್ಟಿ ಪಾಲಮಂಟಪ ಮನೆ, ಬಿಜಾಂದರ್ ಗುತ್ತು ಶಿವರಾಮ ಭಂಡಾರಿ, ಯಶವಂತ ದೇರಾಜೆ, ದೇವಿಪ್ರಸಾದ ಪೂಂಜಾ ಉಪಸ್ಥಿತರಿದ್ದರು.
ಶಿವಪ್ರಸಾದ್ ಮಾಸ್ಟರ್ ವಂದಿಸಿದರು.
