ಬಂಟ್ವಾಳ:  ತಾಲೂಕಿನ  ಮಂಚಿ ಗ್ರಾಮದ ಮೊಂತಿಮಾರುಪಡ್ಪು ಎಂಬಲ್ಲಿ   ಮನೆಯೊಂದರ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಸುಲಿದ ಅಡಿಕೆಯನ್ಬು ಕಳವು ಮಾಡಿದ ಘಟನೆ  ಮಂಗಳವಾರ ರಾತ್ರಿ ನಡೆದಿದೆ. ಮೊಂತಿಮಾರುಪಡ್ಪು ನಿವಾಸಿ ಮೊಯಿದ್ದೀನ್ ಎಂಬವರ ಹಳೆಯ ಮನೆಯಲ್ಲಿ ಈ ಕಳವು  ನಡೆದಿದೆ.  ಸುಮಾರು  76 ಸಾವಿರ ರೂ ಮೌಲ್ಯದ ಸುಮಾರು 3 ಕಿಂಟ್ವಾಲ್ ನಷ್ಟು ಸುಲಿದ   ಅಡಿಕೆಯನ್ನು  ಕಳವುಗೈದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18-50-45-WhatsApp-Image-2019-06-19-at-6.27.08-PM-2 ಮೊಯಿದ್ದೀನ್ ಅವರು ಅಡಿಕೆ ಲೀಸ್ ಪಡೆಯುವ ವ್ಯಾಪಾರಿಯಾಗಿದ್ದು, ಲೀಸ್ ಗೆ ಪಡೆದ ಅಡಿಕೆಯನ್ನು ಇವರ ಮನೆಯ ಹತ್ತಿರ ಇರುವ ಹಳೆಯ ಮನೆಯಂಗಳದಲ್ಲಿ ಒಣಗಿಸಿ ಅದೇ ಮನೆಯಲ್ಲಿ ದಾಸ್ತಾನು ಇಟ್ಟಿದ್ದರು.ಕಾರ್ಮಿಕರು ಅಡಕೆಯನ್ನು ಸುಲಿದು  9 ಗೋಣಿ ಚೀಲದಲ್ಲಿ ತುಂಬಿಸಿ ಹಳೇ ಮನೆಯಲ್ಲಿ  ದಾಸ್ತಾನಿಟ್ಟು ಬೀಗ ಹಾಕಿ ತೆರಳಿದ್ದರು.                               ಬುಧವಾರ ಬೆಳಿಗ್ಗೆ  ಅಡಿಕೆ ಸುಲಿಯಲು ಬಂದಿದ್ದ ಕಾರ್ಮಿಕರೊಂದಿಗೆ  ಹಳೆ ಮನೆಗೆ ಬಂದಾಗ ಚಿಲಕ ಮುರಿದಿತ್ತು.ಒಳ  ಹೋಗಿ ನೋಡಿದಾಗ 9  ಗೋಣಿ ಚೀಲದಲ್ಲಿ ಕೇವಲ 3 ಗೋಣಿಗಳು ಮಾತ್ರ ಉಳಿದಿದ್ದು,ಅಡಕೆ ತುಂಬಿದ 6 ಗೋಣಿಚೀಲ ಕಳವಾಗಿರುವುದು ಕಂಡು ಬಂದಿದೆ. .ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ   ಮತ್ತವರ ಸಿಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ,ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ

By suddi9

Leave a Reply

Your email address will not be published. Required fields are marked *