ಮೂಡುಬಿದಿರೆ: ಶ್ರೀಮತಿ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ಕಲ್ಲಬೆಟ್ಟು ಮೂಡುಬಿದಿರೆ ಇದರ ವತಿಯಿಂದ ಕಲ್ಲಬೆಟ್ಟು-ದ.ಕ ಜಿಲ್ಲಾ ಪಂಚಾಯಿತಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಉದ್ಯಮಿ ಕೆ.ಶ್ರೀಪತಿ ಭಟ್ ಶನಿವಾರ ವಿತರಿಸಿದರು.

Kallabettu school
ಬಳಿಕ ಮಾತನಾಡಿದ ಅವರು, ಅತ್ಯಂತ ಶ್ರೇಷ್ಠವಾದ ವಿದ್ಯಾದಾನವನ್ನು ಮಾಡುವುದು ಭಗವಂತ ಮೆಚ್ಚುವ ಕಾರ್ಯ. ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ದಿನೇಶ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆಶಾ, ದೈ.ಶಿ.ಪರಿವೀಕ್ಷಕ ಶಿವಾನಂದ ಕಾಯ್ಕಿಣಿ, ಪದವೀಧರೇತರ ಮುಖ್ಯೋಪಾದ್ಯಾಯ ವಿನಯಕುಮಾರ್ ಎಂ. ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಪ್ರತಿಭಾ ಎಂ.ಪಿ. ಸ್ವಾಗತಿಸಿ, ವಿಮಲಾ ಧನ್ಯವಾದವಿತ್ತರು.

By Suddi9

Leave a Reply

Your email address will not be published. Required fields are marked *