ಮಳೆಗಾಲ ಪ್ರಾರಂಭಗೊಂಡಿದ್ದು, ಈ ಸಮಯದಲ್ಲಿ ಕಸ ತ್ಯಾಜ್ಯಗಳು ಕೊಳೆತು ಅವುಗಳಲ್ಲಿ ಸೊಳ್ಳೆ ಉತ್ಪತ್ತಿಯಾಗುವುದು ಹೆಚ್ಚು. ರೋಗವಾಹಕ ಸೊಳ್ಳೆಗಳಿಂದ ಡೆಂಗ್ಯೋ, ಮಲೇರಿಯಾ, ಚಿಕನ್ ಗುನ್ಯ ಮಾರಕ ಜ್ವರಭಾದೆಗಳು ಪರಿಸರದಲ್ಲಿ ಹರಡಲು ಕಾರಣವಾಗುತ್ತದೆ. ಸರಕಾರವು ಎಲ್ಲೆಂದರಲ್ಲಿ ಕಸ ಎಸೆಯಬೇಡಿ, ಬೊಂಡದ ಸಿಪ್ಪೆ, ಟಯರುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸ ಬೇಕೆಂದು ಮುದ್ರಣ, ದೃಶ್ಯ, ಶ್ರವಣ ಮಾಧ್ಯಮಗಳ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಆದರೂ ನಮ್ಮ ಉಡುಪಿಯ ನಗರಸಭೆಯು ರಾಷ್ಟ್ರೀಯ ಹೆದ್ದಾರಿ 66, ಶಾರದ ಹೋಟೆಲ್ ಸನಿಹದ ಹೆದ್ದಾರಿಯ ಎರಡು ಪಾರ್ಶ್ವಗಳ ಉದ್ದಕ್ಕೂ ಸಾರ್ವಜನಿಕರಿಂದ ಕಸ ತ್ಯಾಜ್ಯಗಳು ವಿಲೇವಾರಿಗೊಳ್ಳುತ್ತಿದ್ದರೂ, ರಾಶಿ ರಾಶಿ ಕಸದ ತ್ಯಾಜ್ಯಗಳು ಕಣ್ಣಿಗೆ ಕಾಣುತ್ತಿದ್ದರೂ ಇದುವರೆಗೆ ಎಚ್ಚೆತ್ತುಕೊಳ್ಳದೆ ಮೌನವಾಗಿರುವುದಕ್ಕೆ ಉಡುಪಿ ಜಿಲ್ಲಾ

20190615_104333

ನಾಗರಿಕ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಸಮಸ್ಯೆಗೆ ಮುಕ್ತಿ ದೊರೆಕಿಸುವಂತೆ, ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಜಿಲ್ಲಾಡಳಿತ, ನಗರಾಡಳಿತವನ್ನು ಆಗ್ರಹಪಡಿಸಿದ್ದಾರೆ.

ಉಡುಪಿ ನಗರಸಭೆ ವ್ಯಾಪ್ತಿಯಿಂದ ಹಾದು ಹೋಗುವ ರಾಷ್ಪ್ರೀಯ ಹೆದ್ದಾರಿ ಉದ್ದಕ್ಕೂ ಕಸ ತ್ಯಾಜ್ಯಗಳು ರಾಶಿ ಬಿದ್ದುಕೊಂಡಿವೆ. ಅಂಗಡಿ ವ್ಯಾಪರಸ್ಥರ ತ್ಯಾಜ್ಯಗಳು, ಹೋಟೆಲ್ ತ್ಯಾಜ್ಯಗಳು, ಮಾಂಸದಂಗಡಿಗಳ ತ್ಯಾಜ್ಯಗಳು ಎಲ್ಲವೂ ಬಿದ್ದುಕೊಂಡು ಗಬ್ಬು ವಾಸನೆ ಹೊಡೆಯುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇಲ್ಲಿಯದು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ಪ್ರಥಮವಾಗಿ ಇಲ್ಲಿಯ ಕಸದ ರಾಶಿಗಳು ಸ್ವಾಗತಿಸುತ್ತಿವೆ. ಜನಪ್ರತಿನಿಧಿಗಳು ಅಧಿಕಾರಿಗಳು ಈ ಹೆದ್ದಾರಿಯಲ್ಲಿಯೇ ನಿತ್ಯವು ಸಂಚಾರಿಸುತ್ತಾರೆ. ಇವರೆಲ್ಲರಿಗೂ ಇಲ್ಲಿಯ ಸಮಸ್ಯೆ ಕಂಡರೂ ಕಣ್ಣಿದ್ದು ಕುರುಡರಾಗಿದ್ದಾರೆ. ಹಾಗೂ ಎಲ್ಲಾ ವಾರ್ಡುಗಳಲ್ಲಿಯೂ ಅಲ್ಲಲ್ಲಿ ಕಸತ್ಯಾಜ್ಯಗಳು ಬಿದ್ದುಕೊಂಡಿರುವುದು ಕಂಡು ಬರುತ್ತಿವೆ. ಈ ಹಿಂದೆ ಉಡುಪಿ ನಗರಸಭೆಗೆ ಪರಿಸರ ಸ್ವಚ್ಚತೆಯಲ್ಲಿ ಅಗ್ರಮಾನ್ಯ ನಗರಸಭೆಯೆಂದು ಪ್ರಶಸ್ತಿ ಪಡೆದುಕೊಂಡಿದೆ. ನಗರಸಭೆಗೆ ಯಾವ ಮಾನದಂಡದ ಆಧಾರದ ಮೇಲೆ ಪ್ರಶಸ್ತಿಕೊಟ್ಟರು..? ಪ್ರಶಸ್ತಿಯನ್ನು ಖರಿಧಿ ಶಿಫಾರಸ್ಸು ಪ್ರಕ್ರಿಯೆಗಳ ಮೂಲಕ ಗಿಟ್ಟಿಸಿ ಕೊಂಡರೊ..! ಎಂದು ಸಾರ್ವಜನಿಕರ ಅಣುಕು ಮಾತುಗಳು ಕೂಡ ಕೇಳಿಬರುತ್ತಿವೆ.

*ನಿತ್ಯಾನಂದ ಒಳಕಾಡು*
ಸಮಾಜಸೇವಕರು

ಚುನಾವಣೆ ನಡೆದೂ ವರ್ಷ ಕಳೆದರೂ ಆಡಳಿತ ವ್ಯವಸ್ಥೆ ನಗರಸಭೆಯಲ್ಲಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅಧಿಕಾರಿಗಳ ಆಡಳಿತ ನಡೆಯುತ್ತಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ದೊರೆಯದ ಪರಿಸ್ಥಿತಿ ಎದುರಾಗಿದೆ. ಪರಿಸರದ ರಕ್ಷಣೆ, ಸ್ವಚ್ಚತೆಯ ಕಾಳಜಿ ಇಲ್ಲದೆ ರಸ್ತೆಗಳು ಕಸವಿಲೇವಾರಿ ಸ್ಥಳಗಳಾಗಿ ಮಾರ್ಪಟ್ಟಿವೆ. ನಗರಸಭೆಯು ಶಾರದ ಹೋಟೆಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ ವಿಲೇವಾರಿಗೆ ನಿಷೇಧಿತ ಪ್ರದೇಶವೆಂದು ಫಲಕ ಅಳವಡಿಸ ಬೇಕಾಗಿದೆ. ಸಿಸಿ ಕ್ಯಾಮರಗಳ ಅಳವಡಿಸ ಬೇಕು. ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಅಲ್ಲದೇ ಕಸ ವಿಲೇವಾರಿಗೂ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆಗಳ ಒದಗಿಸ ಬೇಕು.

*ತಾರಾನಾಥ್ ಮೇಸ್ತ ಶಿರೂರು*
ಸಮಾಜಸೇವಕ

By suddi9

Leave a Reply

Your email address will not be published. Required fields are marked *