ಮೂಡುಬಿದಿರೆ: ಭಾರತೀಯ ಜೆಸಿಐ ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ 15ರ ಜೆಸಿಐ ಮೂಡುಬಿದಿರೆ ತ್ರಿಭುವನ್ನ 2019ನೇ ಸಾಲಿನ ಅಧ್ಯಕ್ಷ ಸುದೀಪ್ ಬುನ್ನನ್ ಅವರಿಗೆ ಪುತ್ತೂರಿನಲ್ಲಿ ಜರುಗಿದ `ಮುಂಗಾರು’ ಮಧ್ಯಂತರ ವಲಯ ಸಮ್ಮೇಳನದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವಲಯಾಧ್ಯಕ್ಷರಾದ ಅಶೋಕ್ ಚೂಂತಾರ್, ನಿಕಟ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರ್, ವಲಯ ಉಪಾಧ್ಯಕ್ಷ ದೇವೇಂದ್ರ ನಾಯಕ್, ವಲಯಾಧಿಕಾರಿ ಸುಭಾಸ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು.
ಮೂಡುಬಿದಿರೆ ಜೆಸಿಐ ಕಾರ್ಯದರ್ಶಿ ವರುಣ್, ಮೂಡುಬಿದಿರೆ ಜೆಸಿಐಯ ನಿಕಟಪೂರ್ವ ಅಧ್ಯಕ್ಷೆ ಸಂಗೀತಾ ಪ್ರಭು, ಪೂರ್ವಾಧ್ಯಕ್ಷರಾದ ದೀರೇಂದ್ರ ಜೈನ್, ಸಂತೋಷ್ ರೆಡ್ಡಿ, ಸದಸ್ಯರಾದ ಸುನೀಲ್, ಸಂತೋಷ್ ಕುಮಾರ್, ಹರ್ಷಿತಾ ಉಪಸ್ಥಿತರಿದ್ದರು.
