ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ಟೌನ್ ವತಿಯಿಂದ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಸೈಕಲ್ ಜಾಥಾ ನಡೆಯಿತು. ಸ್ವರಾಜ್ಯ ಮೈದಾನದಿಂದ ಕೀರ್ತಿನಗರದಲ್ಲ್ಲಿರುವ ರೋಟರಿ ಟೆಂಪಲ್ಟೌನ್ ಸರ್ಕಲ್ವರೆಗೆ ನಡೆದ ಈ ಜಾಥಾವನ್ನು ತಹಶೀಲ್ದಾರ್ ಸುದರ್ಶನ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ರೋಟರಿ ಕ್ಲಬ್ ಟೆಂಪಲ್ಟೌನ್ ಅಧ್ಯಕ್ಷ ವಿನ್ಸೆಂಟ್ ಡಿಕೋಸ್ತ, ವೃತ್ತ ನಿರೀಕ್ಷಕ ಗಂಗಾಧರ್, ಪುರಸಭೆಯ ಪರಿಸರ ಇಂಜಿನಿಯರ್ ಶಿಲ್ಪಾ, ಪುರಸಭಾ ಸದಸ್ಯ ಪಿ.ಕೆ ಥೋಮಸ್, ಉದ್ಯಮಿ ಸಿ.ಎಚ್.ಗಫೂರ್, ರೋಟರಿ ಕ್ಲಬ್ ಟೆಂಪಲ್ಟೌನ್ ನಿಯೋಜಿತ ಅಧ್ಯಕ್ಷ ಡಾ. ಮಹಾವೀರ ಜೈನ್, ಕಾರ್ಯದರ್ಶಿ ಹರೀಶ್ ಎಂ.ಕೆ, ಉಪಸ್ಥಿತರಿದ್ದರು. ರೋಟರಿ ವಿದ್ಯಾಸಂಸ್ಥೆಯ ಸ್ಕೌಟ್ಸ್, ಗೈಡ್ಸ್ ಎನ್ಸಿಸಿಯ 100ಕ್ಕೂ ಅಧಿಕ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದರು.
