ಮೂಡುಬಿದಿರೆ: ಜ್ಞಾನದ ಸಂಪತ್ತು, ನಮ್ಮಲ್ಲಿರುವ ಇತರ ಸಂಪತ್ತಿಗಿಂತ ಶ್ರೇಷ್ಠ ಸಂಪತ್ತು. ಜ್ಞಾನದ ಸಂಪತ್ತಿಗೆ ಹೆಚ್ಚಿನ ಮಹತ್ವ ನೀಡಿದರೆ, ನಮ್ಮ ಬದುಕು ನಿಜಾರ್ಥದ ಸಂಪತ್ತು ಗಳಿಸಿದಂತಾಗುತ್ತದೆ. ಜ್ಞಾನದ ಸಂಪತ್ತಿನ ಅಪೂರ್ವ, ಅಪರೂಪದ ಕೇಂದ್ರ ಜೈನಕಾಶಿ ಮೂಡುಬಿದಿರೆ. ಇಲ್ಲಿರುವ ಪ್ರಾಚೀನ ಗ್ರಂಥಗಳ ಅಧ್ಯಯನ ಮಾಡುವಲ್ಲಿ ಶ್ರವಕರು ಆಸಕ್ತರಾಗಬೇಕು
ಎಂದು ಮಂಡ್ಯ ಆರತೀಪುರದ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.

mbd_june7_6
ಮೂಡುಬಿದಿರೆ ಶ್ರೀ ಜೈನಮಠದಲ್ಲಿ ಶ್ರುತ ಪಂಚಮಿ ಪ್ರಯುಕ್ತ ಶುಕ್ರವಾರ ಶ್ರುತ ಸ್ಕಂದ ಆರಾಧನೆ ನಡೆದಿದ್ದು, ಅದರ ಅಂಗವಾಗಿ ಧಾರ್ಮಿಕ ಸಭೆಯಲ್ಲಿ ನಡೆಯಿತು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ,
ಶ್ರೀ ಜೈನಮಠದಲ್ಲಿ ಪ್ರಾಚೀನ ಗ್ರಂಥಗಳಿದ್ದು, ಅದರ ಸಂರಕ್ಷಣೆಗೆ ಯೋಜನೆ ರೂಪಿಸಲಾಗಿದೆ. ಸ್ಥಳೀಯ ಶ್ರವಕರು ಈ ತಮ್ಮ ತನು, ಮನ, ಧನ ಸಹಕಾರ ನೀಡಿದಲ್ಲಿ ಅದರ ಕೆಲಸ ಸಕಾಲದಲ್ಲಿ ನೆರವೇರುತ್ತದೆ. ಬಸದಿಗಳ ಸ್ವಚ್ಛತೆ, ರಕ್ಷಣೆಗೆ ಕೂಡ ಶ್ರವಕರು ಸೇವೆ ಸಲ್ಲಿಸುವಂತಾಗಬೇಕು ಎಂದರು.
ಕ್ಷುಲಕ 105 ಜ್ಞಾನಸಾಗರ ಮುನಿಮಹಾರಾಜರು ಧಾರ್ಮಿಕ ಸಂದೇಶ ನೀಡಿದರು.
ಮಂಜುಳಾ ಅಭಯಚಂದ್ರ ಜೈನ್ ಅವರಿಗೆ ಚಂದನ್ ಬಾಲಾ ಪುರಸ್ಕಾರ ಹಾಗೂ ಚಿಕ್ಕಮಗಳೂರು ನವರತ್ನ ಇಂದು ಕುಮಾರ್ ಅವರಿಗೆ ಜಿನವಾಣಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಾಜಿ ಶಾಸಕ ಕೆ.ಅಭಯಚಂದ್ರ ಜೈನ್, ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್, ಮೂಡುಬಿದಿರೆ ಚೌಟರ ಅರಮನೆಯ ಕೇಸರಿ ಅನಂತರಾಜಯ್ಯ, ಸರ್ವಮಂಗಳಾ ಮಹಿಳಾ ಸಂಘದ ಸುಧಾ ಪೃಥ್ವಿರಾಜ್ ಸಹಿತ ಶ್ರವಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *