ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿನಿ ದೀಪಾಲಿ.ಎಂ.ಎಸ್ ನಾಯಕಿಯಾಗಿ ಹಾಗೂ 9ನೇ ತರಗತಿಯ ಆಶಿತಾ ಎನ್. ರಾವ್ ಉಪನಾಯಕಿಯಾಗಿ ಬಹುಮತದಿಂದ ಆಯ್ಕೆಗೊಂಡಿದ್ದಾರೆ.

IMG_2667
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಯೋಗಿಕ ಅರಿವು ಮೂಡಿಸುವ ಹಿನ್ನಲೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಸಿಕೊಂಡು ವಿದ್ಯಾರ್ಥಿ ನಾಯಕರ ಆಯ್ಕೆಗೆ ಚುನಾವಣೆ ನಡೆಸಲಾಯಿತು. ಮತಯಂತ್ರದ ಬಳಕೆ, ಅಭ್ಯರ್ಥಿಗಳಿಗೆ ಚಿಹ್ನೆ ನೀಡಿಕೆ, ಚುನಾವಣಾ ಅಧಿಕಾರಿಗಳ ವಿಶೇಷ ನಿಗಾ ವ್ಯವಸ್ಥೆ, ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು, ಮತದಾರರಿಂದ ಮತದಾನ, ಮತಎಣಿಕೆ ವಿಜೇತ ಅಭ್ಯರ್ಥಿಗಳ ಘೋಷಣೆ ಹೀಗೆ ಎಲ್ಲವೂ ಶಿಸ್ತುಬದ್ಧವಾಗಿ ನಡೆಯಿತು.
ಮುಖ್ಯ ಚುನಾವಣಾಧಿಕಾರಿಯಾಗಿ ಸಿ.ಶ್ರೀಧರ್, ಚುನಾವಣಾ ಅಧಿಕಾರಿಗಳಾಗಿ ವಿಜಯಲಕ್ಷ್ಮೀ ವಿ.ಶೆಟ್ಟಿ ಹಾಗೂ ಗ್ರೇಸ್.ಪಿ.ಸಲ್ಡಾನಾ ಕಾರ್ಯನಿರ್ವಹಿಸಿದರು. ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕಿಯರಾದ ಸುಧಾ ಎನ್. ರಾವ್, ರಶ್ಮಿ ಫೆರ್ನಾಂಡಿಸ್ , ಆಶಾಲತಾ ಎಮ್. ಎಸ್. , ಶೋಭ, ಯಶೋಧ, ಪ್ರಸಾದ್, ಮಂಜುಳಾ ಹೆಚ್.ಗೌಡ ಹಾಗೂ ಶಿಸ್ತುಪಾಲಕರಾಗಿ ವಿಶಾಲಾಕ್ಷಿ ಆಳ್ವ , ರಾಮಚಂದ್ರ ಅಜಿರ, ದಿನಕರ್ ಪೂಜಾರಿ, ಕಾರ್ಯನಿರ್ವಹಿಸಿದರು. ಸಂಚಾಲಕರಾದ ಜೆ.ಪ್ರಹ್ಲಾದ್ ಶೆಟ್ಟಿ ಮಾರ್ಗದರ್ಶನ ನೀಡಿದರು.

By suddi9

Leave a Reply

Your email address will not be published. Required fields are marked *