ಬಂಟ್ವಾಳ: ತುಂಬೆ ಕುಲಾಲ ಸೇವಾ ಸಂಘ ಮತ್ತು ಮಹಿಳಾ ಘಟಕ ಇವರ ಜಂಟಿ ಆಶ್ರಯದಲ್ಲಿ ಸಂಘದ 5 ನೇ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ ತುಂಬೆ ರಾಮನಗರದ ಶಾರದಾ ಸಭಾಭವನದಲ್ಲಿ ನಡೆಯಿತು.  ಸಂಘದ ಅಧ್ಯಕ್ಷ  ಲಿಂಗಪ್ಪ ಕುಲಾಲ್   ಸಭಾಧ್ಯಕ್ಷತೆ ವಹಿಸಿದ್ದರು. ಯುವ ಉದ್ಯಮಿ ಚಂದ್ರಹಾಸ್ ಪಳ್ಳಿಪ್ಪಾಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,  ಸಮಾಜದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳು ನಡೆಯಬೇಕು , ಸದಸ್ಯರಿಗಾಗಿ ನಡೆಸಿದ ಕ್ರೀಡಾಕೂಟ  ಸಂಘಟನೆಯ ದೃಷ್ಠಿಯಿಂದ ಆಗತ್ಯವಾಗಿದೆ  ಎಂದರು.
IMG-20190603-WA0070ಅತಿಥಿಯಾಗಿದ್ದ  ಬಂಟ್ವಾಳ ಕುಲಾಲ ಯುವವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ್ ರವರು ಮಾತನಾಡುತ್ತಾ ಬಂಟ್ವಾಳ ತಾ.ನ ಕುಲಾಲ ಜಾತಿಯ ಗಣತಿ ಆಗಬೇಕಾಗಿದೆ. ಅದಕ್ಕಾಗಿ ಕುಲಾಲ ಯುವ ವೇದಿಕೆ ನಮೂನೆ ಸಿದ್ಧಪಡಿಸಿದೆ. ಈ ವಿಚಾರದಲ್ಲಿ ನಮ್ಮೊಂದಿಗೆ ಕೈ ಜೋಡಿಸಬೇಕಾಗಿದೆ. ಇಂತಹ ಸಮಾರಂಭಗಳಿಂದ  ಸಂಘಟನೆಗೆ ಶಕ್ತಿ ಬರುತ್ತದೆ ಎಂದರು.  ಹೊಟೇಲ್   ಉದ್ಯಮಿ   ಮೋಹನ್ ಕುಲಾಲ್ ಅತಿಥಿಯಾಗಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ನೀಲಪ್ಪ ಸಾಲಿಯಾನ್, ಮಹಿಳಾ ಘಟಕದ ಅಧ್ಯಕ್ಷ ರಾದ ಉಮಾವತಿ ಲಿಂಗಪ್ಪ ಗೌರವ ಸಲೆಹೆಗಾರರಾದ ಶೇಷಪ್ಪ ಮಾಸ್ಟರ್ ಉಪಸ್ಥಿತರಿದ್ದರು.ಕೋಶಾಧಿಕಾರಿ ಹರೀಶ್ ಪೆರ್ಲಾಬೈಲ್ ವಂದಿಸಿದರು. ಮಹಿಳಾ ಘಟಕದ ಗೌರವಾಧ್ಯಕ್ಷೆ ಭಾರತಿಶೇಷಪ್ಪ ನಿರೂಪಿಸಿದರು.ಸಂದೀಪ್ ಕುಲಾಲ್, ಗೌರೀಶ್, ಗೋಪಾಲ್ ಬೆದ್ರಾಡಿ, ದೀನೇಶ್ ಪೆರ್ಲಬೈಲ್, ಶಿವಣ್ಣ ಮತ್ತು ಪ್ರಿಯ ಸತೀಶ್ ಸಹಕರಿಸಿದರು  ಭಾಸ್ಕರ್ ಕುಲಾಲ್ ಸ್ವಾಗತಿಸಿ,  ವರದಿ ಮಂಡಿಸಿದರು.

By suddi9

Leave a Reply

Your email address will not be published. Required fields are marked *