ಬಂಟ್ವಾಳ: ;ಮಂಗಳೂರಿನಾದ್ಯಂತ ರಕ್ತ ದ ಕೊರತೆ ಇರುವ ಈ ಸಂದರ್ಭದಲ್ಲಿ ರಕ್ತದಾನ ಮಾಡುವುದು ಪುಣ್ಯದ ಕೆಲಸ .ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆಯ ಈ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಂಡ್ವಾಳ ಉಪವಿಭಾಗದ ಎ .ಎಸ್ .ಪಿ. ಸೈದುಲ್ ಅದಾವತ್ ರವರು ಹೇಳಿದ್ದಾರೆ. ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ನೇತೃತ್ವದಲ್ಲಿ ದಕ್ಷಿಣ ಕನ್ನಡ ಪೊಲೀಸ್ ಇಲಾಖೆ, ಕೆ ಎಂ ಸಿ ಮಂಗಳೂರು ಇವರ ಸಹಯೋಗ ದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು , ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ಎಂ ಎಸ್ , ನಗರ ಠಾಣೆಯ ಎಸ್ ಐ ಚಂದ್ರಶೇಖರ್ ರವರು ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ದಲ್ಲಿ ರೋಟರಿ ಕ್ಲಬ್ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ , ಶ್ರೀನಿವಾಸ್ ಇಂಜಿನಿಯರ್ ಕಾಲೇಜು ಸಹ ಪ್ರಾಧ್ಯಾಪಕ ಸುದೀಂದ್ರ ಎಚ್ ಏನ್ , ಫರಂಗಿಪೇಟೆ ರೋಟರಿ ಅಧ್ಯಕ್ಷ ಜಯರಾಮ್ ಶೇಕ , ತಾಲೂಕ ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಸೇವಾಂಜಲಿ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ . ಕೋಶಾಧಿಕಾರಿ ಗೋವಿಂದ ಶೆಣೈ , ಮಾಜಿ ತಾಪಂ ಸದಸ್ಯ ಸೋಮಪ್ಪ ಕೋಟ್ಯಾನ್ , ಪದ್ಮನಾಭ್ ಶೆಟ್ಟಿ ಪುಂಚಮೆ , ಪ್ರಕಾಶ್ ಕಿದೆಬೆಟ್ಟು , ಪಿ ಎ ರಹೀಮ್ ಬಿ ಸಿ ರೋಡ್ , ಮತ್ತಿತರರು ಉಪಸ್ಥಿತರಿದ್ದರು ಸೇವಾಂಜಲಿ ಪ್ರತಿಷ್ಠಾನ ದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಪ್ರಸ್ತಾವನೆಗೈದರು. ತಾರಾನಾಥ್ ಕೊಟ್ಟಾರಿ ತೇವುರವರು ಸ್ವಾಗತಿಸಿದರು , ದೇವದಾಸ್ ಶೆಟ್ಟಿ ಕೊಡ್ಮಣ್ ರವರು ವಂದಿಸಿದರು.
