ಬಂಟ್ವಾಳ: ಯುವಕನೊರ್ವ ರಸ್ತೆ ಬದಿಯಲ್ಲಿ ಬೈಕಿ ನಿಲ್ಲಿಸಿ ಮೊಬೈಲ್ ನಲ್ಲಿ ಮಾತಾನಾಡುತ್ರಿದ್ದ ವೇಳೆ ಪುರಸಭಾ ಸದಸ್ಯ ಸಹಿತ ಮೂವರು ಸೇರಿ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆಗೈದ ಘಟನೆ ಬಂಟ್ವಾಳ ಸಮೀಪದ ಲೊರೆಟ್ಟೊ ಎಂಬಲ್ಲಿ ಗುರುವಾರ ರಾತ್ರಿ ವೇಳೆ ನಡೆದಿದೆ. ಮೂಲತ: ಲೊರೆಟ್ಟೋದ ಪೆದುಮಲೆ ನಿವಾಸಿ ನಿತಿನ್ ಪೂಜಾರಿ ಎಂಬವರು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಇವರು ಮಾರ್ನಬೈಲು ಸಮೀಪದ ಬೊಳ್ಳಾಯಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ನಿತಿನ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಮೂರು ತಿಂಗಳ ಹಿಂದೆಯಷ್ಟೆ ಊರಿಗೆ ಬಂದಿದ್ದರು.ಮೂಲ ಮನೆಯಾದ ಪೆದಮಲೆಯಲ್ಲಿ ಮನೆ ನಿರ್ಮಾಣ ಹಾಗೂ ಬೊರೆವೆಲ್ ಕೊರೆಸುವ ಸಿದ್ದತೆಯಲ್ಲಿದ್ದು, ಮಾಡಿದ್ದು ಕ್ರಮಕೈಗೊಂ ಸಂಜೆಯ ವೇಳೆ ತನ್ನ ಬುಲೆಟ್ ಬೈಕ್ ನಲ್ಲಿ ಪೆದಮಲೆಗೆ ಬಂದಿದ್ದರು. ಇಲ್ಲಿಂದ ವಾಪಾಸು ಬೊಳ್ಳಾಯಿಗೆ ಹೋಗುತ್ತಿದ್ದಾಗ ವಿದೇಶದಿಂದ ಬಂದ ಅಣ್ಣನ ಪೋನ್ ಕರೆಯಲ್ಲಿ ಲೊರೆಟ್ಟೊ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮಾತನಾಡುತ್ತಿರುವಾಗ ಪುರಸಭಾ ಸದಸ್ಯ ವಾಸು ಪೂಜಾರಿ ಮತ್ತವರ ಮಕ್ಕಳಾದ ರಾಕೇಶ್,ಚೇತನ್ ಆ್ಯಕ್ಟಿವಾ ಹೊಂಡದಲ್ಲಿ ಬಂದು ನಿತಿನ್ ಅವಾಚ್ಯವಾಗಿ ಬೈದು ಇಲ್ಲಿಂದ ತೆರಳುವಂತೆ ಬೆದರಿಸಿದರೆನ್ನಲಾಗಿದೆ. ನಿತಿನ್ ಆಸ್ಥಳದಿಂದ ಸ್ವಲ್ಪ ಕೆಳಭಾಗಕ್ಕೆ ಬಂದು ಬೈಕ್ ನಿಲ್ಲಿಸಿ ಮತ್ತೆ ಅಣ್ಣನ ಜೊತೆ ಮಾತನಾಡುತ್ತಿದ್ದಾಗ ವವಾಸು ಪೂಜಾರಿಯವರ ಇಬ್ಬರು ಮಕ್ಕಳಾದ ರಾಕೇಶ್ ಮತ್ತು ಚೇತನ್ ಆಕ್ಟೀವ್ ಹೊಂಡಾದಲ್ಲಿ ರಾಡ್ ನಿಂದ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದಾರೆಂದು ಎಂದು ನಿತಿನ್ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ತನ್ನ ಅಂಗಿಯ ಕಿಸೆಯಲ್ಲಿ ಅರುವತ್ತು ಸಾವಿರ ರೂ. ನಗದನ್ನು ದೋಚಲಾಗಿದೆಯಲ್ಲದೆ ಬೈಕ್ ನ್ನು ಹಾನಿಗೊಳಿಸಿದ್ದಾರೆ ಎಂದು ಅವರು ಠಾಣೆ ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇವರ ನಡುವಿನ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಈ ಹಲ್ಲೆ ಪ್ರಕರಣ ನಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಆಸ್ಪತ್ರೆ ಗೆ ಬಂಟ್ವಾಳ ನಗರ ಠಾಣಾ ಎಸ್. ಐ. ಚಂದ್ರಶೇಖರ್ ಭೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಶಾಸಕರ ಭೇಟಿ: ಈ ಘಟನೆಯ ಬಗ್ಗೆ ಸುದ್ದಿ ತಿಳಿದ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ನಿತಿನ್ ಪೂಜಾರಿಯವರಿಂದ ಮಾಹಿತಿ ಪಡೆದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆಪೊಲೀಸ್ ಅಧಿಕಾರಿಗಳಿಗೆಸೂಚಿಸಿದರು.ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ,ಪುರಸಭಾ ಸದಸ್ಯರಾದ ಗೋವಿಂದ ಪ್ರಭು,ರಮಾನಾಥ ರಾಯಿ,ಉಮೇಶ್ ಅರಳ ಮತ್ತಿತರರಿದ್ದರು.
