ಬಂಟ್ವಾಳ : ತುಂಬೆ ಡ್ಯಾಂ ನೀರಿನ ಮಟ್ಟ ಗಣನೀಯವಾಗಿ ಕುಸಿತವಾಗಿದ್ದು, ಬುಧವಾರ 2.93 ಮೀ.ನಷ್ಟಿತ್ತು ,ನೇತ್ರಾವತಿ ನದಿಯಲ್ಲಿನ ಹೂಳೆತ್ತುವ ಪ್ರಾಯೋಗಿಕ ಕಾರ್ಯ ಮಂಗಳವಾರ ನಡೆದಿದೆ. ಇದರ ಚಿತ್ರೀಕರಣದ ವೀಡಿಯೋವನ್ನು ಜಿಲ್ಲಾಧಿಕಾರಿಯವರಿಗೆ ರವಾನಿಸಲಾಗಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಗಣಿ ಇಲಾಖಾಧಿಕಾರಿಗಳು ಬುಧವಾರ ನದಿಗೆ ಯಂತ್ರ ಇಳಿಸಲಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಹಾಗಾಗಿ ಇನ್ನೆರಡು ದಿನದಲ್ಲಿ ಬಿ.ಸಿ.ರೋಡಿಗೆ ಸಮೀಪದ ತಲಪಾಡಿಯಲ್ಲಿ ನೇತ್ರಾವತಿ ನದಿಯಲ್ಗಿ ಅಧಿಕೃತವಾಗಿ ಹೂಳೆತ್ತುವ ಕಾರ್ಯ ಶುರುವಾಗುವ ಸಾಧ್ಯತೆ ಇದೆ.
ತಲಪಾಡಿ ಬಳಿ ಹೂಳೆತ್ತುವ ಕಾರ್ಯಕ್ಕೆ ನೇತ್ರಾವತಿ ನದಿ ನೀರಿಗೆ ಡ್ರಜ್ಜಿಂಗ್ ಯಂತ್ರವನ್ನು ನೀರಿಗೆ ಈಗಾಗಲೇ ಇಳಿಸಲಾಗಿದ್ದು,ದೆಹಲಿಯ ನೆಲ್ಕೊ ಕಂಪೆನಿ ಹೂಳೆತ್ತುವ ಗುತ್ತಿಗೆ ಪಡೆದಿದ್ದು ಉಪಗುತ್ತಿಗೆಯನ್ನು ಮಂಗಳೂರಿನ ಖಾಸಗಿ ವ್ಯಕ್ತಿಯೊಬ್ಬರಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.


ಹೂಳೆತ್ತುವುದಕ್ಕಾಗಿ ಈಗಾಗಲೇ 25 ಟನ್ ಭಾರವನ್ನು ಹೊಂದಿರುವ ಸಾಮರ್ಥ್ಯದ ಪಂಟೂನ್ ತೇಲುವ ಗೋಲಗಳನ್ನು ನೀರಿನಲ್ಲಿ ರಿಸಲಾಗಿದೆ. ಡ್ರಜ್ಜಿಂಗ್ ಪಂಪನ್ನು ಅಳವಡಿಸಿ, ಪೈಪ್ಲೈನ್ಗಳ ಮೂಲಕ ನದಿಯಲ್ಲಿ ತುಂಬಿರುವ ಹೋಳು, ಕಸವನ್ನು ಮೇಲೆತ್ತುವುದಕ್ಕೆ ಸಿದ್ದತೆಗಳು ನಡೆದಿದೆ.
ಇಲ್ಲಿ ಅಳವಡಿಸಿರುವ ಡ್ರಜ್ಜಿಂಗ್ ಯಂತ್ರವು ಗಂಟೆಗೆ 100 ಕ್ಯುಬಿಕ್ ಮೀಟರ್ ನಷ್ಟು ಹೂಳನ್ನು ಮೇಲೆತ್ತಿ ಹಾಕುಲಿದೆ. ಹೂಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ನಾಲ್ಕು ಎಕ್ರೆ ವಿಶಾಲ ಪ್ರದೇಶವನ್ನು ನಿರ್ವಾಹಕರು ಕಾದಿರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಹೂಳೆತ್ತುವ ನಿರ್ವಹಣೆ ತಂತ್ರಜ್ಞರು ವಿವಿಧ ಬಂದರುಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಈಗಾಗಲೇ ಪಣಂಬೂರು ಬಂದರಿನಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದ್ದು ಅಲ್ಲಿಂದ ತುಂಬೆ ಡ್ಯಾಂಗೆ ಸ್ಥಳಾಂತರ ಗೊಂಡಿದ್ದಾರೆ.
ಬಾಕ್್ಸ್…
ನೇತ್ರಾವತಿ ನದಿಯಲ್ಲಿ ನಿರ್ದಿಷ್ಟ ಸೂಚಿತ ಪ್ರದೇಶದಲ್ಲಿ ಹೂಳೆತ್ತುವ ಕಾರ್ಯ ಸುಮಾರು ಮೂರು ತಿಂಗಳ ಕಾಲ ನಡೆಯುವ ಸಾಧ್ಯತೆ ಇದೆ. ಮಳೆ ಬಂದರೂ ಕೆಲಸ ಮಾಡಲಾಗುತ್ತದೆ. ಡ್ರಜ್ಜಿಂಗ್ ಎಂದರೆ ಕೇವಲ ಮರಳು ಮಾತ್ರವಲ್ಲ ಕೆಸರು ಮಣ್ಣು, ಕಸ ಸಹಿತ ಎಲ್ಲವನ್ನು ಮೇಲಕೆತ್ತಲಾಗುತ್ತದೆ. ಪ್ರಾಥಮಿಕ ಹಂತವಾಗಿ ಈಗಾಗಲೇ ಯಂತ್ರಗಳ ಜೋಡಿಸಿ ಪ್ರಾಯೋಗಿಕವಾಗಿ ಹೂಳೆತ್ತಲಾಗಿದ್ದು,ಜಿಲ್ಲಾಧಿಕಾರಿ

