ಸುದ್ದಿ9 ಮೂಡುಬಿದರೆ: ಎಂಟು ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿದ ಮೂಡುಬಿದರೆ ಆಳ್ವಾಸ್ ಪುರುಷರ ಹಾಗೂ ಮಹಿಳೆಯರ ತಂಡಗಳು ಬಾಲ್ ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನಗಳನ್ನು ಪಡೆದು ರಾಜ್ಯ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.
ಆಳ್ವಾಸ್ ಪುರುಷರ ತಂಡ ಫೈನಲ್ಸ್ನಲ್ಲಿ ಮೈಸೂರು ತಂಡವನ್ನು 29-13 ಹಾಗೂ 29-17 ನೇರ ಸೆಟ್ಗಳಿಂದ ಸೋಲಿಸಿದರೆ, ಆಳ್ವಾಸ್ ಮಹಿಳಾ ತಂಡ ಮಂಡ್ಯ ಜಿಲ್ಲೆಯನ್ನು 29-3 ಹಾಗೂ 29-5 ರಿಂದ ಸೋಲಿಸಿ ಪ್ರಶಸ್ತಿ ಪಡೆದವು.
ಮಹಿಳೆಯರ ತ್ರೋಬಾಲ್ನಲ್ಲಿ ದ.ಕ.ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ತಂಡ ಉಡುಪಿ ಜಿಲ್ಲೆಯನ್ನು 25-23 ಹಾಗೂ 25-10 ರಿಂದ ಸೋಲಿಸಿದರೆ, ಪುರುಷರ ವಿಭಾಗದ ಫೈನಲ್ಸ್ನಲ್ಲಿ ಮೈಸೂರು ಜಿಲ್ಲೆ ಚಾಮರಾಜನಗರ ತಂಡವನ್ನು 25-27, 25-18, 25-14 ರಿಂದ ಸೋಲಿಸಿ ಪ್ರಶಸ್ತಿ ಪಡೆದವು.
ಪುರುಷರ ಹ್ಯಾಂಡ್ಬಾಲ್ನಲ್ಲಿ ಹಾಸನ ತಂಡವು ಚಿಕ್ಕಮಗಳೂರು ತಂಡವನ್ನು 14-4 ರಿಂದ ಸೋಲಿಸಿ ಪ್ರಥಮ ಸ್ಥಾನವನ್ನು ಹಾಗೂ ಮಹಿಳೆಯರ ವಿಭಾಗದಲ್ಲಿ ಕೊಡಗು ತಂಡವು ಮೈಸೂರು ತಂಡವನ್ನು 9-6 ರಿಂದ ಸೋಲಿಸಿ ಪ್ರಶಸ್ತಿ ಪಡೆಯಿತು.

Alvas

 

By suddi9

Leave a Reply

Your email address will not be published. Required fields are marked *