ಮೂಡುಬಿದಿರೆ: ಇಲ್ಲಿನ ಆರದಿರಲಿ ಬದುಕು ಆರಾಧನಾ ಸೇವಾ ತಂಡದ ಆಶ್ರಯದಲ್ಲಿ ಮೇ.21ರಂದು ಹೊಸನಾಡು ಕೊಡ್ಯಡ್ಕ ಶ್ರೀದೇವಿ ಅನ್ನಪೂರ್ಣೇಶ್ವರಿ ದೇವಸ್ಥಾನಲ್ಲಿ ಸಂಭ್ರಮ ಎಂಬ ಹೆಸರಿನೊಂದಿಗೆ ಕೊಡಗು ನೆರೆ ಸಂತ್ರಸ್ತರಿಗೆ ಸಹಾಯಧನ ಮತ್ತು ಚಲನಚಿತ್ರ ಪುಟಾಣಿ ಪವರ್” ಪ್ರಮೋಶನ್ ನಡೆಯಲಿದೆ.

aradirali belaku

 
ಪತ್ರಕರ್ತ ಹರೀಶ್ ಕೆ. ಆದೂರು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉದ್ಯಮಿ ಕೆ.ಶ್ರೀಪತಿ ಭಟ್ ದೀಪ ಪ್ರಜ್ವಲನಗೊಳಿಸಲಿದ್ದಾರೆ. ಪತ್ರಕರ್ತರಾದ ಪ್ರಸನ್ನ ಹೆಗ್ಡೆ, ಶೇಖರ ಅಜೆಕಾರು, ಯಶೋಧರ ವಿ.ಬಂಗೇರಾ, ಜವನೆರ್ ಬೆದ್ರದ ಸ್ಥಾಪಕ ಅಮರ್ ಕೋಟೆ, ಪುಟಾಣಿ ಪವರ್ ಸಿನಿಮಾದ ನಿರ್ದೇಶಕ ಎಂ.ಗಜೇಂದ್ರ, ಬಾಲನಟಿ ಆರಾಧನಾ ಭಟ್ ಮುಖಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭಕ್ತಿಶ್ರೀ ಆಚಾರ್ಯ ಪ್ರಧಾನ ಭಾಷಣ ಮಾಡಲಿದ್ದಾರೆ.
ಚಿತ್ರನಟರಾದ ಬೋಜರಾಜ ವಾಮಂಜೂರು, ಸೂರಜ್ ಸನಿಲ್, ಸುರೇಶ್ ಅಂಚನ್, ನಮ್ಮ ಬೆದ್ರ ವಾರಪತ್ರಿಕೆಯ ಸಂಪಾದಕ ಅಶ್ರಫ್ ವಾಲ್ಪಾಡಿ, ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್, ತುಳು ರಂಗಭೂಮಿ ಕಲಾವಿದ ಮಣಿ ಕೋಟೆಬಾಗಿಲು, ಬೆದ್ರ ತುಳುಕೂಟದ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಸದ್ಗುರು ಕಲಾ ತಂಡದ ಶಶಿಧರ ಜಂಕಳ, ಕಾದಂಬರಿಕಾರ ಸುಶಾಂತ್ ಕೋಟ್ಯಾನ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

By suddi9

Leave a Reply

Your email address will not be published. Required fields are marked *