ಬಂಟ್ವಾಳ:ವಿಪರೀತ ಕಡಿಮೆ ತೂಕದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಹಾಲು, ಪೌಷ್ಟಿಕ ಪೌಡರ್ ಸಹಿತ ವೈದ್ಯಕೀಯ ತಪಾಸಣೆ, ಜೌಷಧೋಪಚಾರ ನೀಡಲಾಗುತ್ತದೆ. ಇದನ್ನು ಹೆತ್ತವರುಸಕಾಲಿಕವಾಗಿ ಮಕ್ಕಳಿಗೆ ನೀಡುವ ಕ್ರಮ ಅನುಸರಿಸಬೇಕು ಎಂದು ಪ್ರಭಾರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಾಯತ್ರಿ ಬಾಯಿ.ಎಚ್ ಹೇಳಿದರು. ಬಿ.ಸಿ.ರೋಡ್ ಸ್ತ್ರೀಶಕ್ತಿ ಭವನದಲ್ಲಿ ನಡೆದ ಸಾಧಾರಣ ಕಡಿಮೆ ತೂಕದ ಮತ್ತುವಿಪರೀತ ಕಡಿಮೆ ತೂಕದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ರೋಟರಿ ಹಿರಿಯ ಸದಸ್ಯೆ ಪ್ರತಿಭಾ.ಎ ರೈ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ರೋಟರಿ ಕ್ಲಬ್ ಕಾರ್ಯದರ್ಶಿ ಶಿವಾನಿ ಬಾಳಿಗಾಮಾತನಾಡಿ, ಮಕ್ಕಳ ಬಗ್ಗೆ ಕಾಳಜಿ ಇರಲಿ. ಸಮಯಕ್ಕೆ ಸರಿಯಾಗಿ ಆಹಾರ ನೀಡುವ ಕ್ರಮವನ್ನು ಮರೆಯಬೇಡಿ. ನಿಗದಿತ ತೂಕದ ಆಹಾರವನ್ನು ನಿರ್ದಿಷ್ಟ ಪ್ರಾಯಕ್ಕೆ ಸೂಕ್ತ ರೀತಿಯಲ್ಲಿ ನೀಡುವುದು. ಕೂಡಾ ಆರೋಗ್ಯದ ದೃಷ್ಟಿಯಲ್ಲಿಮುಖ್ಯವಾಗಿದೆ. ಮಗುವಿನ ಆರೋಗ್ಯ ಸರಿ ಇರಬೇಕಾದರೆ ತಾಯಿಯ ಆರೋಗ್ಯವೂ ಮುಖ್ಯ.

16bhcdpo ಮಕ್ಕಳನ್ನು ನೋಡಿಕೊಳ್ಳುವ ನಾವು ಅವರ ಪಾಲನೆಯಲ್ಲಿ ಹೆಚ್ಚು ಗಮನ ನೀಡಬೇಕು. ಕಡಿಮೆ ತೂಕದ ಮಕ್ಕಳ ಬಗ್ಗೆ ನಿರಂತರ ಕಾಳಜಿವಹಿಸಿ ಎಂದರು. ಮಕ್ಕಳು ಕೆಲವೊಮ್ಮೆ ಆಹಾರವನ್ನು ತಿರಸ್ಕರಿಸಬಹುದು. ಕೆಲವೊಮ್ಮೆ ಹೆಚ್ಚು ತಿನ್ನುವ ಕ್ರಮವು ಇರಬಹುದು. ಇದನ್ನು ತಾಯಿ ಗಮನಿಸಿ ಮಗುವಿನ ಅಪೇಕ್ಷೆಯನ್ನು ತಿಳಿದು ಅರ್ಹ ಆಹಾರ ನೀಡಬೇಕು. ಎಂದರು.  ಕ್ಲಬ್ಉಪಕಾರ್ಯದರ್ಶಿ ಸ್ಮಿತಾ ಸದಸ್ಯೆ, ವಾಣಿ ಕಾರಂತ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ವಾಣಿಶ್ರೀ, ತುಂಬೆ ಫಾದರ್ ಮುಲ್ಲರ್ ವೈದ್ಯಾಧಿಕಾರಿ ಡಾ.ಅಮಲ್, ಡಾ. ಜಿಯೋ, ಡಾ.ಮೆರಿಸ್ಸಾ  ಡಾ. ಶಿಲ್ಪಾ ಉಪಸ್ಥಿತರಿದ್ದರು. ಶಿಶು ಅಭಿವೃದ್ದಿ ಯೋಜನೆ ಬಂಟ್ವಾಳ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲಿ ಕಾರ್ಯಕ್ರಮ ನಡೆಯುತು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ರೋಟರಿ ವತಿಯಿಂದಜೌಷಧೋಪಚಾರ ನೀಡಲಾಯಿತು. ಹಿರಿಯ ಮೇಲ್ವಿಚಾರಕಿ ಬಿ.ಭಾರತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಮೇಲ್ವಿಚಾರಕಿ ಉಷಾ ವಂದಿಸಿದರು.

By Suddi9

Leave a Reply

Your email address will not be published. Required fields are marked *