ಬಂಟ್ವಾಳ:ಇಲ್ಲಿನ ಪೂಂಜ ಸಮೀಪದ ಕಾರಣಿಕ ಪ್ರಸಿದ್ಧ ಎಲಿಯಮಾಗಣೆ ಉಪ್ಪಿರ ಶ್ರೀ ಕೊಡಮಣಿತ್ತಾಯ ಮೂಜಿಲ್ನಾಯ ದೈವಸ್ಥಾನದಲ್ಲಿ ನಿರ್ಮಾಣಗೊಂಡ ಪ್ರಧಾನ ಗೋಪುರ ಮತ್ತು ಕಾರ್ಯಾಲಯ ಇದೇ 5ರಂದು ಬೆಳಿಗ್ಗೆ 11.30 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಉದ್ಯಮಿ ಟಿ.ವರದರಾಜ ಪೈ ಮಾವಿನಕಟ್ಟೆ ಇವರು ಗೋಪುರ ಉದ್ಘಾಟಿಸಲಿದ್ದು, ಉದ್ಯಮಿ ಸದಾನಂದ ಮೇಲಾಂಟ ಮಂಗಳೂರು ಇವರು ಕಾರ್ಯಾಲಯ ಉದ್ಘಾಟಿಸುವರು.
ಬಿ.ಸಿ.ರೋಡಿನ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ.ಕೆ.ತುಕಾರಾಮ ಪೂಜಾರಿ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಹಿರಿಯ ವೈದ್ಯ ಡಾ.ಎನ್.ಪ್ರಭಾಚಂದ್ರ ಜೈನ್ ಮತ್ತಿತರ ಗಣ್ಯರು ಭಾಗವಹಿಸುವರು. ಇದೇ ವೇಳೆ ಚಂಡಿಕಾಯಾಗ, ಸಾರ್ವಜನಿಕ ಪರ್ವಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ ಕೆ.ಜಂಕಳ ತಿಳಿಸಿದ್ದಾರೆ.
