ಪೊಳಲಿ : ಪೊಳಲಿಯ ರಾಮಕೃಷ್ಣ ತಪೋವನ ಆಶ್ರಿತ ಹಸಿರು ಪ್ರಕೃತಿ ಆಶ್ರಯದಲ್ಲಿ ಡಾ. ಪಿ ಸುಬ್ರಹ್ಮಣ್ಯ ಭಟ್ ಮಿತ್ತೂರು ಇವರಿಂದ ಮೇ 5ರಂದು ಬೆಳಿಗ್ಗೆ 9:30ಕ್ಕೆ ರಾಮಕೃಷ್ಣ ತಪೋವನದಲ್ಲಿ ಆಕ್ಯುಪ್ರಶರ್ ಮತ್ತು ಸುಜೋಕ್ ಚಿಕಿತ್ಸೆ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಡಯಾಬಿಟಿಸ್, ಸ್ಪಾಂಡಿಲೈಟಿಸ್, ವಾತ, ಮಂಡಿ ನೋವು, ಗಂಟುಗಳ ನೋವು, ಬಿಪಿ, ಮೈಗ್ರೇನ್, ಗ್ಯಾಸ್ ಟ್ರಬಲ್ ಮತ್ತು ಇತರ ವ್ಯಾಧಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸಲಾಗುತ್ತದೆ ಎಂದು ತಪೋವನದ ಸ್ವಾಮಿ ವಿವೇಕಚೈತನ್ಯಾನಂದರ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9845165108/7899566245/9980519432 ಸಂಪರ್ಕಿಸಬಹುದು.
