ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಂ ಮಾರ್ಷಲ್ ಆರ್ಟ್ಸ್ ಸೆಂಟರ್ ವಿದ್ಯಾರ್ಥಿ, ಬಿ.ಸಿ.ರೋಡು ಸಮೀಪದ ತಲಪಾಡಿ ನಿವಾಸಿ ಸಾದಿಕ್ ಅವರು ಉನ್ನತ ಶಿಕ್ಷಣಕ್ಕಾಗಿ ನ್ಯೂಝಿಲ್ಯಾಂಡ್ ದೇಶಕ್ಕೆ ತೆರಳುತ್ತಿರುವ ಹಿನ್ನಲೆಯಲ್ಲಿ ಇತ್ತೀಚೆಗೆ ಸಂಸ್ಥೆಯ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಮಂಗಳೂರಿನ ಸರೋಶ್ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸಿನಲ್ಲಿ ಪದವಿ ಪಡೆದಿರುವ ಸಾದಿಕ್ ಇದೀಗ ನ್ಯೂಝಿಲ್ಯಾಂಡಿನಲ್ಲಿ ಡಿಪ್ಲೊಮಾ ಇನ್ ಹೋಟೆಲ್ ಮ್ಯಾನೇಜ್ಮೆಂಟ್ ಪೋಸ್ಟ್ ಗ್ರಾಜ್ಯುಯೇಟ್ ಪಡೆಯಲು ತೆರಳುತ್ತಿದ್ದಾರೆ.
ಈ ಸಂದರ್ಭ ದಯಾನಂದ ಮೊಗರ್ನಡು, ಮೋಹನ್ ಮೆಲ್ಕಾರ್, ಹೈದರ್ ಗೊಡಿನಬಳಿ, ವಿವೇಕ್ ಆಚಾರ್ಯ ನಂದವಾರ, ನಿಝಾರ್ ಕಲ್ಲಡ್ಕ, ರಾಜೇಶ್ ಮೊಗರ್ನಾಡು, ಪ್ರಮೋದ್, ಜಿಮ್ ಮುಖ್ಯ ತರಬೇತುದಾರರಾದ ಇಲ್ಯಾಸ್ ಪಿ.ಎಂ., ರಫೀಕ್ ಮೆಜೆಸ್ಟಿಕ್, ಮಾರ್ಷಲ್ ಆರ್ಟ್ಸ್ ಟ್ವೆಕಾಂಡೋ ತರಬೇತುದಾರ ಇಸಾಕ್ ಇಸ್ಮಾಯಿಲ್ ನಂದಾವರ ಮೊದಲಾದವರು ಉಪಸ್ಥಿತರಿದ್ದರು.

