ಬಂಟ್ವಾಳ: ಶ್ರೀ ಮಹಮ್ಮಾಯಿ ಕ್ಷೇತ್ರ ಕಾರಂಬಂಡೆ ಇಲ್ಲಿ ಪಾದುಕನ್ಯಾಸ ಕಾರ್ಯಕ್ರಮ ವಾಸ್ತುಶಿಲ್ಪಿ ರಮೇಶ ಕಾರಂತ ಬೆದ್ರಡ್ಕ ಇವರ ಉಪಸ್ಥಿತಿಯಲ್ಲಿ ಕ್ಷೇತ್ರದ ಜೀಣೋದ್ದಾರ ಸಮಿತಿ ಗೌರವಾಧ್ಯಕ್ಷ ಕೇಶವ ಶಾಂತಿ ನರಿಕೊಂಬು ಅವರ ಪೌರೋಹಿತ್ಯದಲ್ಲಿ ಎ.29 ರಂದು ಸೋಮವಾರ ನಡೆಯಿತು. ಕ್ಷೇತ್ರದ ಜೀಣೋದ್ದಾರ ಸಮಿತಿ ಗೌರವಾಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಅನುವಂಶೀಯ ಆಡಳಿತ ಮೋಕ್ತೇಸರ ಅರುಣ್ ಕುಮಾರ್, ಅಧ್ಯಕ್ಷ ಹರೀಶ್ ಕೋಟ್ಯಾನ್ ಮಡಿವಾಳಬೆಟ್ಟು, ಸಲಹೆಗಾರ ಸಂತೋಷ್ ಕುಮಾರ್ ಕೊಟ್ಟಿಂಜ, ಪ್ರಧಾನ ಕಾರ್ಯದರ್ಶಿ ನಾಗೇಶ್ ದರ್ಬೆ, ಕೋಶಾಧಿಕಾರಿ ಜಯಶಂಕರ ಕಾನ್ಸಾಲೆ, ಕುಬೇರ ಮತ್ತಿತರರು ಹಾಜರಿದ್ದರು.

