ಮಂಗಳೂರು:ಉತ್ತರಪ್ರದೇಶದ ಗ್ರೇಟರ್ ನೊಯ್ಡಾ ದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ -2019 ರಲ್ಲಿ ಮಂಗಳೂರಿನ ಸ್ಕೇಟಿಂಗ್ ಪಟು ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ಒಂದು ಬೆಳ್ಳಿ ಪದಕ ಪಡೆದಿದ್ದು, ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ರೋಲರ್ ಸ್ಕೇಟಿಂಗ್ ಫೇಡರೇಷನ್ ಆಫ್ ಇಂಡಿಯಾ ಹಾಗೂ ಉತ್ತರ ಪ್ರದೇಶ ರೋಲರ್ ಸ್ಪೋರ್ಟ್ಸ್ ಅಸೋಸಿಯೇಷನ್ ಆಯೋಜಿಸಿದ ಆಲ್ ಇಂಡಿಯಾ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ 14 ವರ್ಷದೊಳಗಿನ ವಿಭಾಗ, 500 ಮೀಟರ್ ರಿಂಕ್ ರೇಸ್ ನಲ್ಲಿ ಮಂಗಳೂರಿನ ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ.
|
ReplyForward
|

