ವಿಟ್ಲ: ಕಳೆದ ಹನ್ನೆರಡು ದಿನಗಳಿಂದ ವಿಟ್ಲ ಜೆಸಿ ಸ್ಕೂಲ್ನಲ್ಲಿ ನಡೆಯುತ್ತಿರುವ ಅಭಿಮತ ಟಿವಿ ಪ್ರವರ್ತಿತ, ಸನ್ ಪ್ರೀಮಿಯಂ ಪ್ರಾಯೋಜಿತ, ಜೂನಿಯರ್ ಬಿಗ್ಬಾಸ್ನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಮಾಜಕ್ಕೆ ಪ್ಲಾಸ್ಟಿಕ್ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವಿಟ್ಲ ಪೇಟೆಯ ಆಸುಪಾಸಿನಲ್ಲಿ, ದೇವಸ್ಥಾನ ಮಠ ಮಂದಿರಗಳ ಬದಿಗಳಲ್ಲಿ, ಚರ್ಚು ಮಸೀದಿಗಳ ಆವರಣಗಳಲ್ಲಿ ,ಶಾಲಾ ಕಾಲೇಜು ಆವರಣಗಳಲ್ಲಿ, ಐದು ತಂಡಗಳಾಗಿ ಮಕ್ಕಳು ಶುಚಿತ್ವ ಕೆಲಸವನ್ನು ಕೈಗೊಂಡರು. ಅಲ್ಲಲ್ಲಿ ಬಿಸಾಕಿದ ಪ್ಲಾಸ್ಟಿಕ್ ಗಳನ್ನು ಆಯುವ ಮೂಲಕ ಪೇಟೆ ಜನರಲ್ಲಿ ಪ್ಲಾಸ್ಟಿಕ್ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಶುಚಿತ್ವದ ಬಗ್ಗೆ ಬಹಳಷ್ಟು ಮಕ್ಕಳು ಕೂಡ ತಿಳಿದುಕೊಂಡು ವಿನೂತನ ಕಾರ್ಯಕ್ರಮ ಎನಿಸಿಕೊಳ್ಳುವುದರ ಜತೆಗೆ ಉರಿ ಬಿಸಿಲನ್ನು ಲೆಕ್ಕಿಸದೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಬಿಗ್ ಬಾಸ್ ಕಾರ್ಯಕ್ರಮವು ಯಶಸ್ವಿ ಸಮಾಜಮುಖಿ ಕಾರ್ಯಕ್ರಮ ಎಂದು ಸಾರ್ವಜನಿಕರಿಂದ ಮಾತು ಕೇಳಿ ಬರುತ್ತಿದ್ದು, ಜೊತೆಗೆ ಎಲ್ಲ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಅಳವಡಿಸುವುದು ಉತ್ತಮ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
