ಕೈಕಂಬ: ಶ್ರೀ ರಾಮಕೃಷ್ಣ ತಪೋವನದಲ್ಲಿ ಎಪ್ರಿಲ್ 15ರಿಂದ 21ರವರೆಗೆ ಉಚಿತ ಬೇಸಿಗೆ ಮಕ್ಕಳ ಚೈತನ್ಯ ಶಿಬಿರ ಆಯೋಜಿಸಲಾಗಿದ್ದು, ಭಾನುವಾರ ಸಮಾರೋಪ ಸಮಾರಂಭ ಜರುಗಿತು.
ಸಮಾರೋಪದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಆಶಾಜ್ಯೋತಿ ರೈ, “ಇತರ ಸೃಷ್ಟಿಗಿಂತ ಮನುಷ್ಯ ಜನ್ಮ ಶ್ರೇಷ್ಠ. ಇದೊಂದು ನಮಗೆ ಸಿಕ್ಕಿದ ಅವಕಾಶ. ಈ ಜನ್ಮಕ್ಕಾಗಿ ಸಂಕಟಪಡುವವರು ಕಡಿಮೆ” ಎಂದು ವಿವರಿಸಿದರು. ಆಶ್ರಮದ ವಿವೇಕ ಚೈತನ್ಯಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಯಾಗಿ ಪ್ರಕಾಶಾನಂದ ಉಪಸ್ಥಿತರಿದ್ದರು.
ಎ. 15ರಂದು ವೀಣಾ ಶೆಟ್ಟಿ ಶಿಬಿರ ಉದ್ಘಾಟಿಸಿದರು. ಅಂದು ಗುರುಕುಲ ಮತ್ತು ಆಧುನಿಕ ವಿದ್ಯಾಭ್ಯಾಸ ಸವಾಲುಗಳು, ವಿದ್ಯಾರ್ಥಿ ಜೀವನದಲ್ಲಿ ಸಚ್ಚಾರಿತ್ರ್ಯತೆ, ಸಮರ ಕಲೆಗಳು(ಮಾರ್ಶಲ್ ಆಟ್ರ್ಸ್) ಪ್ರದರ್ಶನ ಮತ್ತು ಯೋಗ ವಿಷಯದಲ್ಲಿ ಶಿಬಿರಾರ್ಥಿಗಳಿಗೆ ತಿಳಿಸಲಾಯಿತು. ಸುಬ್ರಾಯ ನಂದೋಡಿ, ವಿಠಲ ಬೇಲಾಡಿ ಮತ್ತು ರಾಜೇಶ ಮಂಜೇಶ್ವರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಎ. 16ರಂದು ಸುರೇಖಾ ರಾಜ್(ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ವಿದ್ಯಾಭ್ಯಾಸದ ಗುರಿ), ಕಾಂತಪ್ಪ ಶೆಟ್ಟಿ(ನೈತಿಕ ಗುಣಗಳ ಕುಸಿತ ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು) ಹಾಗೂ ಡಾ. ಕೃಷ್ಣಮೂರ್ತಿ ಶಿಕಾರಿಪುರ(ವಿದ್ಯಾಭ್ಯಾಸದ ಧೋರಣೆಗಳು ಮತ್ತು ಆಧ್ಯಾತ್ಮಿಕ ಚಿಂತನೆಗಳು/ಬುದ್ಧಿಶಕ್ತಿ ವರ್ಧಕ ಆಟಗಳು) ಹಾಗೂ ಡಾ. ಜಯಶಂಕರ ಮಾರ್ಲ(ಮಕ್ಕಳಲ್ಲಿ ಹೃದಯ ಕಾಯಿಲೆ ನಿವಾರಣೆ/ಪರಿಣಾಮ) ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಎ. 17ರಂದು ಸುರೇಶ್ ಪರ್ಕಳ(ನವಭಾರತದ ಕನಸು ನನಸಾಗಲು ವಿದ್ಯಾರ್ಥಿಗಳ ಪಾತ್ರ), ದಾಮೋದರ(ವಿದ್ಯಾರ್ಥಿಗಳ ಮೇಲೆ ಪಾಶ್ಚಿಮಾತ್ಯರು ಬೀರಿದ ಉತ್ತಮ ಮತ್ತು ಕೆಟ್ಟ ಪ್ರಭಾವ), ಡಾ. ಪೂರ್ಣಿಮಾ ಜೆ(ಹದಿಹರೆಯದ ಸಮಯದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಮತ್ತು ಪರಿಹಾರ), ಯುವರಾಜ್ ಮತ್ತು ತಂಡ(ಮನರಂಜನೆಯ ಆಟಗಳು) ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಎ. 18ರಂದು ಪುಂಡಿಕಾಯಿ ಗಣಪಯ್ಯ ಭಟ್(ಯಶಸ್ವಿನತ್ತ ಪಯಣ), ಪ್ರಸಾದ್(ಶಿಕ್ಷಣ ನೀತಿ ಬದಲಾದರೆ ವಿದ್ಯಾಭ್ಯಾಸ ಸುಧಾರಣೆಯಾಗಬಹುದೇ ?), ಸ್ವಾಮಿ ವಿವೇಕ ಚೈತನ್ಯಾನಂದ(ಆಧ್ಯಾತ್ಮಿಕ ಜೀವನ ಮತ್ತು ವಿದ್ಯಾರ್ಥಿಗಳು), ಗೋವಿಂದ ಅಡಿಗ(ವಿಜ್ಞಾನದ ಬೆಳವಣಿಗೆ/ಸ್ಪೋಕನ್ ಇಂಗ್ಲಿಷ್) ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಎ. 19ರಂದು ವಿಕ್ರಮ ದತ್ತ್(ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ), ವಿದ್ಯಾ ಮಲ್ಯ(ಆಧುನೀಕರಣದಿಂದ ವಿದ್ಯಾರ್ಥಿಗಳು ಎದುರಿಸಬೇಕಾದ ಸವಾಲುಗಳು-ವೀಶ್ವಕ್ಕೆ ಭಾತತದ ಕೊಡುಗೆ), ಮಾಧವ ಉಳ್ಳಾಲ(ಪರಿಸರ ಮತ್ತು ಮಾನವನ ಪುರಾತನ ಸಂಬಂಧ), ಪ್ರೊ. ಜಯಂತ ಕುಲಶೇಖರ(ಮಾನವ ಜೀವನದಲ್ಲಿ ಬಾಹ್ಯಾಕಾಶದ ಪ್ರಭಾವ) ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಎ. 20ರಂದು ಕುಮಾರ್(ಮಕ್ಕಳ ಹಕ್ಕು ಮತ್ತು ರಕ್ಷಣೆ), ಆಶಾ ಜೆ(ಪ್ರಸ್ತುತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ), ಲಕ್ಷ್ಮೀ ನಾರಾಯಣ(ಯೋಗದಿಂದ ಸರ್ವಾಂಗೀಣ ಬೆಳವಣಿಗೆ), ಪ್ರಸಾದ್. ಜಯಶೀಲ(ಪ್ರಥಮ ಚಿಕಿತ್ಸೆ/ಜೀವನ ಸುರಕ್ಷತೆ ಕ್ರಮಗಳು) ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಎ. 21ರಂದು ಶಾರದಾ(ಕರಕುಶಲ ಕಲೆಗಳ ತರಬೇತಿ), ನಾದಮಣಿ ನಾಲ್ಕೂರು(ಪ್ರಕೃತಿಯ ತಾಪಮಾನಕ್ಕೆ ಕಾರಣ ಮತ್ತು ಪರಿಹಾರ) ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಮಾರೋಪ ಸಮಾರಂಭದಲ್ಲಿ ಭಜನೆ, ಮಕ್ಕಳಿಂದ ಭಾಷಣ ಮತ್ತು ಚರ್ಚೆ ನಡೆಯಿತು. ಆಶಾ ಜ್ಯೋತಿ ರೈ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
