ಉಡುಪಿ: ಸುನಾಗ್ ಆಸ್ಪತ್ರೆ ಮತ್ತು ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಎ.14 ಆದಿತ್ಯವಾರ ಸುನಾಗ್ ವಠಾರದಲ್ಲಿ ಬೃಹತ್‍ಆರೋಗ್ಯತಪಾಸಣಾ ಮತ್ತು ಮೂಳೆ ಮತ್ತು ಎಲುಬು ರೋಗದ ಬಗ್ಗೆ ಮಾಹಿತಿಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಯದ್ಯಕೀಯ ನಿರ್ದೇಶಕಡಾ|| ನರೇಂದ್ರಕುಮಾರ್ ಹೆ.ಎಸ್ ಬಿದ್ದು ಮೂಳೆ ಮುರಿಯುವುದು ಸಾಮಾನ್ಯಆದರೆ ಮೂಳೆ ಮುರಿದು ಬೀಳುವುದು ಅತ್ಯಂತ ಅಪಾಯಕಾರಿ ಲಕ್ಷಣವಾಗಿದೆ ಈ ನಿಟ್ಟಿನಲ್ಲಿ ಮೂಳೆ ಸವೆತರೋಗವಾದ ಅಸ್ಟಿಯೋಪೊರೊಸಿಸ್ ಬಗ್ಗೆ ಹೆಚ್ಚಿನ ಗಮನ ಹರಿಸಬೇಕುಎಂದರು. ಅದ್ಯಕ್ಷತೆಯನ್ನು ಜೇಸಿಐ ಅದ್ಯಕ್ಷಜಗದೀಶ್ ಶೆಟ್ಟಿ ವಹಿಸಿದ್ದರು.ವೇದಿಕೆಯಲ್ಲಿ ದಂತ ವೈದ್ಯರಾದಡಾ|| ಮಂಜುನಾಥ ಮೆಸ್ತ,ಡಾ|| ವೀಣಾ ನರೇಂದ್ರ ಮುಂತಾದವರಿದ್ದರು.ಈ ಸಂದರ್ಭದಲ್ಲಿ ಮೂಳೆ ಸಾಂದ್ರತೆ ಮತ್ತು ಮಧುಮೇಹರಕ್ತತಪಾಸಣೆ ನಡೆಯಿತು.

