ಉಡುಪಿ:ಬೇಸಿಗೆಯಲ್ಲಿ ನೀರು ಮತ್ತು ಸರಿಯಾದ ಆಹಾರವಿಲ್ಲದೆ ಸಾವಿರಾರು ಅಮೂಲ್ಯ ಪಕ್ಷಿ ಸಂಕುಲ ಆಪಾಯ ಎದುರಿಸುತ್ತಿದೆ ಈ ನಿಟ್ಟಿನಲ್ಲಿ ಈ ಸಮಯದಲ್ಲಿ ಅವುಗಳ ಸಂತತಿಯನ್ನು ಉಳಿಸಲು ನೀರು ಮತ್ತು ಆಹಾರ ನೀಡುವ ವಿನೂತನ ಕಾರ್ಯಕ್ರಮ “ಸೇವ್ ಬರ್ಡ “ ಪಕ್ಷಿಗಳಿಗೆ ಕಾಳು ನೀರು ಯೋಜನೆಯನ್ನು ಉದ್ಘಾಟಿಸಿ ಜೆಸಿಐ ಕಾರ್ಯಕ್ರಮ ವಿಭಾಗದ ನಿರ್ದೇಶಕ ಸಂದಿಪ್ ಕುಮಾರ ಹೇಳಿದರು.ಅವರು ಜೆಸಿಐ ಉಡುಪಿ ಸಿಟಿ ಇದರ ವತಿಯಿಂದ ಅಜ್ಜರಕಾಡು ಪಾರ್ಕನಲ್ಲಿ ಎ.6 ಯುಗಾದಿಯಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದಲ್ಲಿಬೇಸಿಗೆ ಸಮಯದಲ್ಲಿಅಪೂರ್ವವಾದ ಪಕ್ಷಿಗಳ ಸಂಕುಲವನ್ನು ಉಳಿಸಿದರೆ ಮಾತ್ರ ಅದರ ಸಂತತಿ ಉಳಿಯಲು ಸಾದ್ಯ ಎಂದರು.ಅದ್ಯಕ್ಷತೆಯನ್ನು ಜೆಸಿಐ ಅದ್ಯಕ್ಷ ಜಗದೀಶ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಲಯ ಕಾರ್ಯದರ್ಶಿ ರಾಘವೇಂದ್ರ ಪ್ರಭುಕರ್ವಾಲು,ಶಕೀರ್ ಹಾವಂಜೆ,ಸುಕೇಶ್ ಶೆಟ್ಟಿ,ರಾಜಶ್ರೀ,ಸ್ವರ್ಣಶ್ರೀ,ವೀಕ್ಷಿತ್,ರಪೀಕ್ ಖಾನ್,ಮುಂತಾದವರಿದ್ದರು.ಈ ಅಭಿಯಾನ ನಿರಂತರವಾಗಿ ನಡೆಯಲಿದೆ.

