ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾ.ಪಂ. ಮತ್ತು ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಬಿ.ಎ.ಕೈಗಾರಿಕಾ ತರಬೇತಿ ಸಂಸ್ಥೆ ತುಂಬೆಯಲ್ಲಿ ಜರಗಿದ ಕಾನೂನು ಸಾಕ್ಷರಥಾ ಮತ್ತು ಸಂಚಾರಿ ನ್ಯಾಯಾಲಯದ ಕಾನೂನು ಮಾಹಿತಿ ಶಿಬಿರವನ್ನು ಹಿರಿಯ ಸಿವಿಲ್ ನ್ಯಾಯಾಧೀ ಶ ಮತ್ತು ಜೆ.ಎಂ.ಎಫ್.ಸಿ ಹಾಗೂ ತಾ.ಕಾ.ಸೇ.ಸಮಿತಿ ಅಧ್ಯಕ್ಷ ಮಹಮ್ಮದ್ ಇಮ್ತಿಯಾಝ್ ಅಹಮ್ಮದ ಉದ್ಘಾಟಿಸಿದರು.

KAR_9573

ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಅಬ್ದುಲ್ ಜಲೀಲ್ ಬಾಲಕಾರ್ಮಿಕ ಕಾಯಿದೆ ಮತ್ತು ಮಕ್ಕಳ ಹಕ್ಕು ಕಾಯಿದೆ ಬಗ್ಗೆ ಮಾಹಿತಿ ನೀಡಿದರು. ಬಿ.ಎ.ಕೈಕಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ನವೀನ್ ಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಚಂದ್ರಶೇಖರ ಪುಂಚಮೆ , ನ್ಯಾಯವಾದಿ ಸತೀಶ್.ಬಿ, ಆಶಾಮಣಿ, ದಯಾನಂದ ರೈ, ತಾ.ಕಾ.ಸೇ.ಸಿಬ್ಬಂದಿ ನರಸೇಗೌಡ, ಶಿಕ್ಷಕ ಅಬ್ದುಲ್ ಕಬೀರ್ ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *