ಉಡುಪಿ:ಅಕ್ರಮ ಹಣವನ್ನು ಮನೆಯಲ್ಲಿ ಇಟ್ಟಿರುವ ಬಗ್ಗೆ ಬಂದಿರುವ ಮಾಹಿತಿಯ ಆಧಾರದಲ್ಲಿ ಚುನಾವಣೆಯ ಸಂದರ್ಭದಲ್ಲಿ ನೇಮಕ ಗೊಂಡಿರುವ ಪ್ಲೈಯಿಂಗ್ ಸ್ಕ್ವಾಡ್ ನೇತೃತ್ವದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ಸಂಜೆ ಇಬ್ಬರು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಿ ತನಿಖೆ ನಡೆಸುತಿದ್ದಾರೆ ಎಂದು ತಿಳಿದುಬಂದಿದೆ. ಸದಾಶಿವ ಕಟ್ಟೆಗುಡ್ಡೆ ಹಾಗೂ ಲಕ್ಷಣ ಸಂಪಿಗೆ ನಗರ ಎಂಬವರ ಮನೆಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಸದಾಶಿವ ಅವರನ್ನು ಐಟಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದರೆ, ಲಕ್ಷ್ಮಣ ಅವರ ಪಿತ್ರೋಡಿಯಲ್ಲಿರುವ ಮನೆಯಲ್ಲಿ ತಪಾಸಣೆ ನಡೆಸುತಿದ್ದಾರೆಂದು ತಿಳಿದುಬಂದಿದೆ.

WhatsApp Image 2019-04-05 at 9.50.48 AM

ಇದೇ ವೇಳೆ ಇಂದು ಬೆಳಗ್ಗೆ ಕಟಪಾಡಿ- ಶಿರ್ವ ರಸ್ತೆಯಲಿ ಸಾಗುತಿದ್ದ ಕಾರಿನಿಂದ (ಕೆಎ20ಎಂಬಿ 7066) ಫ್ಲಯಿಂಗ್ ಸ್ಕ್ವಾಡ್ ತಂಡ ದಾಖಲೆಗಳಿಲ್ಲದ 1,25,690ರೂ. ನಗದನ್ನು ವಶಪಡಿಸಿಕೊಂಡಿದೆ.

By suddi9

Leave a Reply

Your email address will not be published. Required fields are marked *