ಮಂಡ್ಯ:ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಪ್ರಚಾರದ ಅಬ್ಬರ ಜೋರಾಗಿದೆ. ಈ ಮಧ್ಯೆ ಉತ್ತಮ ಪ್ರಜಾಕೀಯ ಪಕ್ಷದಿಂದ ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿ ದಿವಾಕರ್ ಅವರನ್ನು ಕಣಕ್ಕಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ದಿವಾಕರ್ ಪರ ಪ್ರಚಾರ ನಡೆಸಲು ಆಗಮಿಸಿದ್ದ ಸಂಸ್ಥಾಪಕ ಅಧ್ಯಕ್ಷ ಉಪೇಂದ್ರ ಪ್ರಚಾರ ಸಭೆಗೆ ಜನರಿಲ್ಲದ ಕಾರಣ ಬೇಸರಗೊಂಡು ವಾಪಸ್ಸಾಗಿರುವ ಘಟನೆ ನಡೆದಿದೆ.
ಬೆಂಗಳೂರಿನಿಂದ ಮದ್ದೂರಿಗೆ ತೆರಳಿದ್ದ ಉಪೇಂದ್ರ ಅವರು, ಪಟ್ಟಣದ ಹೊಳೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಅಭ್ಯರ್ಥಿ ದಿವಾಕರ್ ಜೊತೆ ಪೂಜೆ ಸಲ್ಲಿಸಿದ್ರು. ದೇವಾಲಯದ ಸಂಪ್ರದಾಯದಂತೆ ಒಂದು ಕಾಲು ರೂಪಾಯಿ ಕಾಣಿಕೆ ಇಟ್ಟು ಹರಕೆ ಹೊತ್ತರು.ನಂತರ ಶಿವಪುರ ಧ್ವಜ ಸತ್ಯಾಗ್ರಹ ಸೌಧದಿಂದ, ಹಳೇ ಎಂ.ಸಿ. ರಸ್ತೆ ಮೂಲಕ ಪ್ರವಾಸಿ ಮಂದಿರದ ವೃತ್ತದವರೆಗೆ ರೋಡ್ ಶೋ ಮೂಲಕ ಪ್ರಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ನಿಗದಿಗೊಳಿಸಲಾಗಿತ್ತು.ಆದ್ರೆ ರೋಡ್ ಶೋಗೆ ಜನರೇ ಬಂದಿರಲಿಲ್ಲ. ಹೀಗಾಗಿ ಬೇಸರಗೊಂಡು ಉಪೇಂದ್ರ ಅವರು ವಾಪಾಸ್ ತೆರಳಿದ್ರು ಎನ್ನಲಾಗಿದೆ.

