ಬಂಟ್ವಾಳ: ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಹಾಗೂ ಆಕೆಯ ತಂದೆ ಬಿ.ಸಿ.ರೋಡಿನ ವಸತಿ ಸಂಕೀರ್ಣವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಿ.ಸಿ.ರೋಡಿನ ವಿವೇಕ ನಗರದ ಖಾಸಗಿ ವಸತಿ ಸಂಕೀರ್ಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು, ಪ್ರಭಾಕರ (45) ಮತ್ತು ಪ್ರಮಣ್ಯ (12) ಮೃತಪಟ್ಟಿವರು. ವಿಷ ಸೇವಿಸಿ ಇಬ್ಬರೂ ಸಾವನ್ನಪ್ಪಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ಮಗಳಿಗೆ ವಿಷವಿಕ್ಕಿ ತಾನೂ ವಿಷ ಸೇವಿಸಿ ಸಾವನ್ನಪ್ಪಿದರೇ ಅಥವಾ ಇನ್ನೇನಾದರೂ ಕಾರಣಗಳಿವೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಭಾಕರ್ ಅವರು ಮೂರು ವರ್ಷಗಳಿಂದೀಚೆಗೆ ಈ ಮನೆಯಲ್ಲಿ ಬಾಡಿಗೆಗೆಂದು ಬಂದಿದ್ದು, ಹಿಂದೆ ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದರು. ಅವರ ಮಗಳು ಪ್ರಣಮ್ಯ ಬಂಟ್ವಾಳ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಪ್ರತಿಭಾವಂತೆಯಾಗಿದ್ದಳು.

ಶನಿವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ವಿಷಯ ಗೊತ್ತಾಗಿದ್ದು, ಕೂಡಲೇ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಕಾಂತ್, ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್, ಎಸ್ಸೈ ಚಂದ್ರಶೇಖರ್ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, ರಾತ್ರಿವರೆಗೂ ಶವಮಹಜರು ಮತ್ತು ಘಟನೆಯ ಕುರಿತು ಸುದೀರ್ಘ ತನಿಖೆ ನಡೆಸುತ್ತಿದ್ದಾರೆ. ವಿಷಯ ಗೊತ್ತಾದ ಕೂಡಲೇ ಸ್ಥಳದಲ್ಲಿ ಸುತ್ತಮುತ್ತಲಿನವರು, ಕುತೂಹಲಿಗರು ಜಮಾಯಿಸಿದ್ದರು

By suddi9

Leave a Reply

Your email address will not be published. Required fields are marked *