ಪೊಳಲಿ: ಮಾ.13ರಂದು ನಡೆಯುವ ಬ್ರಹ್ಮಕಲಶಾಭಿಷೇಕಕ್ಕೆ ಸುಮಾರು 10 ಲಕ್ಷ ಮಂದಿ ಜನ ಸೇರುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆ ಸಂಪೂರ್ಣ ಬಂದೋಬಸ್ತ್ ಕೈಗೊಂಡಿದ್ದು, ಯಾವುದೇ ತುರ್ತು ಸಂದರ್ಭ ಉಂಟಾದರೆ ಅದನ್ನು ನಿಭಾಯಿಸಲು ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಸೇರಿದಂತೆ ವಾಹನಗಳನ್ನು ಸಜ್ಜುಗೊಳಿಸಲಾಗಿದೆ.
ಪೊಳಲಿ-ಕೈಕಂಬ ರಸ್ತೆಯಲ್ಲಿ ವಾಹನ ದಟ್ಟನೆ ಉಂಟಾಗಿ ಟ್ರಾಫಿಕ್ ಜಾಂ ಉಂಟಾಗದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಂಟ್ವಾಳ ಗ್ರಾಮಾಂತರ, ಬಜಪೆ ಠಾಣಾ ಪೊಲೀಸರು, ಗೃಹರಕ್ಷಕ ದಳ, ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಗ್ನಿಶಾಮಕ ದಳದ ವಾಹನ, ಅಂಬ್ಯಲೆನ್ಸ್ ಅನ್ನು ಚೆಂಡಿನ ಗದ್ದೆಯಲ್ಲೇ ಸರ್ವಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಲಾಗಿದೆ. ವೈದ್ಯಕೀಯ ತಂಡ, ಮೆಸ್ಕಾಂ ಸೇರಿ ನಾನಾ ಇಲಾಖೆಗಳು ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಸನ್ನದ್ಧ ಸ್ಥಿತಿಯಲ್ಲಿ ಇವೆ.
