ಪೊಳಲಿ:ಪೊಳಲಿ ಬ್ರಾಹ್ಮಣ ಸಮುದಾಯದ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ 18 ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ-ಸಮಗ್ರ ನೀರಾವರಿ ವ್ಯವಸ್ಥೆಯನ್ನು ಮಾಡಲಾಯಿತು.
ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಭಾನುವಾರ ಬೆಳಿಗ್ಗೆ ಉದ್ಘಾಟಿಸಿದರು. ದೇವರ ಅಭಿಷೇಕಕ್ಕೆ ಹೊರತುಪಡಿಸಿ ಅಡುಗೆ, ಕುಡಿಯುವ ನೀರು ಸೇರಿ ಶಾಶ್ವತ ಬಾವಿ ಸಹಿತ ಟ್ಯಾಂಕ್ನ ಮೂಲಕ ನೀರಿನ ಸರಬರಾಜು ವ್ಯವಸ್ಥೆ ಇದರಲ್ಲಿದೆ.ಕ್ಷೇತ್ರದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ, ಗಂಗಾ ಪೂಜೆ, ಕಲಶ ಪೂಜೆ ಸೇರಿ ನಾನಾ ಧಾರ್ಮಿಕ ವಿದಿವಿಧಾನಗಳ ನಡೆಸಲಾಯಿತು.
ದೇವಳದ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ, ಯು.ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್,ರಾಮ್ ಭಟ್ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಅರ್ಚಕ ವೃಂದದವರು ಸೇರಿ ಹಲವರು ಇದ್ದರು.


