ಪೊಳಲಿ: ಸಂಪೂರ್ಣ ನವೀಕೃತಗೊಂಡ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಮಾ. 4ರಿಂದ 13ವರೆಗೆ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ(ಮಾ. 1) ಬೆಳಿಗ್ಗೆ 8 ಗಂಟೆಗೆ ಪಾಕಶಾಲೆಯಲ್ಲಿ `ಹಾಲುಕ್ಕಿಸುವ’ ಮುಹೂರ್ತ ನಡೆಯಿತು.1vppolalimilk mhurtha

ಪೂಜೆ ಮತ್ತು ಹೋಮಗಳ ನೆರವೇರಿಸಿದ ಬಳಿಕ ದೇವಸ್ಥಾನದ ತಂತ್ರಿ ಸುಬ್ರಹ್ಮಣ್ಯ ಭಟ್, ಬ್ರಹ್ಮಕಲಶೋತ್ಸವದ ದಿನಗಳಲ್ಲಿ ಅನ್ನದಾಸೋಹ ಸುಸೂತ್ರವಾಗಿ ನೆರವೇರುವ ಉದ್ದೇಶದಿಂದ ಪಾಕಶಾಲೆಯಲ್ಲಿ ಹಾಲುಕ್ಕಿಸುವ ಮುಹೂರ್ತ ಪೂಜೆ ನೆರವೇರಿಸಿ, ಅಡುಗೆ ಭಟ್ಟರಿಗೆ ಪ್ರಸಾದ ವಿತರಿಸಿದರು.1vp milk mhurtha

ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಉಳಿಪಾಡಿಗುತ್ತು ತಾರನಾಥ ಆಳ್ವ,ಚೇರ ಸೂರ್ಯನಾರಾಯಣ ರಾವ್, ದೇವಸ್ಥಾನದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ರಾಮ ಭಟ್, ವಿಷ್ಣುಮೂತಿ ನಟ್ಟೋಜ,ಮಾಧವ ಮಯ್ಯ, ಅರ್ಚಕ ವರ್ಗದವರು ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಶಾಸಕ ರಾಜೇಶ್ ನಾಯ್ಕ್,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮಾನಾಥ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೃಷ್ಣಕುಮಾರ್ ಪೂಂಜ, ಚಂದ್ರಹಾಸ ಶೆಟ್ಟಿ ರಂಗೋಲಿ, ಶೆಡ್ಡೆ ಮಂಜುನಾಥ ಭಂಡಾರಿ, ಕೃಷ್ಣರಾಜ ಮಾರ್ಲ,ಜೀವರಾಜ್ ಆಳ್ವ ಅಮ್ಮುಂಜೆಗುತ್ತು, ವೆಂಕಟೇಶ ನಾವಡ, ಸುಬ್ರಾಯ ಕಾರಂತ, ಚಂದ್ರಶೇಖರ ಭಂಡಾರಿ, ಭುವನೇಶ್ ಪಚಿನಡ್ಕ, ಸದಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *