ಪೊಳಲಿ: ಜೋಗಿ ಸಮಾಜ ಬಾಂಧವರು ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿರುವ ಶ್ರೀಕ್ಷೇತ್ರಪಾಲ ದೇವರ ಗುಡಿಯ ದ್ವಾರಕ್ಕೆ ಸುಮಾರು 9 ಲಕ್ಷ ರೂ. ಮೌಲ್ಯದ ರಜತ ಕವಚ ಹೊದಿಕೆಯ ಸಮರ್ಪಣಾ ಸಮಾರಂಭವು ಫೆ.28ರ ಗುರುವಾರ ನಡೆಯಿತು.DSC_3310

ಶ್ರೀಕ್ಷೇತ್ರ ಕದ್ರಿ ಜೋಗಿ ಮಠದ ಮಠಾದಿಪತಿ ಪರಮ ಮೂಜ್ಯ ಶ್ರೀ ಯೋಗಿರಾಜ ನಿರ್ಮಲನಾಥ್ ಮಹಾರಾಜ್ ಇವರ ಮಾರ್ಗದರ್ಶನದಲ್ಲಿ ಹಾಗು ಮಟ್ಟಿ ಶ್ರೀ ಕಾಲಭೈರವ ಮಂಜುನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ಉಮೇಶ್‍ನಾಥ್ ಕದ್ರಿ ಇವರ ಉಪಸ್ಥಿತಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಶ್ರೀ ಕಾಲಭೈರವ ಮಂಜುನಾಥ ದೇವಸ್ಥಾನ ಜೋಗಿಮಠ ಮಳಲಿ ಇಲ್ಲಿಂದ ವಾಹನ ಜಾಥಾದ ಮೂಲಕ ಕೈಕಂಬ ಪೇಟೆಯಾಗಿ ಪೊಳಲಿ ದೇವಸ್ಥಾನದವರೆಗೆ ಭವ್ಯಮೆರವಣಿಗೆಯೊಂದಿಗೆ ಶ್ರೀಕ್ಷೇತ್ರಕ್ಕೆ ಸಮರ್ಪಿಸಲಾಯಿತು.

ಅನುವಂಶಿಕ ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ, ಅನುವಂಶಿಕ ಮಕ್ತೇಸರ ಉಳಿಪಾಡಿ ಗುತ್ತು ತಾರನಾಥ ಆಳ್ವ ಮಾಧವ ಭಟ್,ನಾರಾಯಣ ಭಟ್, ರಾಮ್ ಭಟ್, ಪರಮೇಶ್ವರ ಭಟ್,ಸುಬ್ರಮಣ್ಯ ತಂತ್ರಿ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮಾನಾಥ ರೈ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ನಾಯ್ಕ್, ಬ್ರಹ್ಮಕಲಶೋತ್ಸವ ಸಮಿತಿ ಸರ್ವ ಸದಸ್ಯರು ಸರ್ವಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *