ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ಪೊಳಲಿ ಕ್ಷೇತ್ರದ ಜೀರ್ಣೋದ್ಧಾರದ ಪೂರ್ವಬಾವಿಯಾಗಿ ಏಪ್ರೀಲ್ 20 -2017ರಂದು ಶ್ರೀ ದೇವರುಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ಆ ದಿನದಲಾಗಾಯ್ತು, ಧಾರ್ಮಿಕ ವಿದಿವಿಧಾನಗಳೊಂದಿಗೆ ಭಜನಾ ಸೇವೆಯು ನಡೆಯಬೇಕೆಂಬ ಪ್ರಶ್ನಾವಿಧಿಯ ಪ್ರಕಾರ ಆ ದಿನದಿಂದ ಲಾಗಾಯ್ತು ಮಾ .3.2019ನೇ ರವಿವಾರ ಸಂಜೆಯಿಂದ ಬೆಳಗಿನ ಜಾವದವರೆಗೆ ನಡೆದು ಸಮಾಪ್ತಿಗೊಳ್ಳಲಿದೆ.
ದಿನಂಪ್ರತಿ ಸಂಜೆ 5-30ರಿಂದ ರಾತ್ರಿ ಮಹಾಪೂಜೆಯವರೆಗೆ ಸಮಯ 7-00 ಘಂಟೆಯವರೆಗೆ ನಡೆಯುತ್ತಿದ್ದು, ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿಯ ಉಮೇದ್ವಾರಿಕೆಯಲ್ಲಿ ದಕ್ಷಿಣಕನ್ನಡಜಿಲ್ಲೆ, ಉಡುಪಿ, ಉತ್ತರಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಭಜನಾ ತಂಡಗಳು ಭಾಗವಹಿಸಿದ್ದು, ಈ ಎಲ್ಲಾ ಕಾರ್ಯಕ್ರಮವನ್ನು ಪೊಳಲಿ ವೆಂಕಟೇಶ ನಾವಡ ಹಾಗೂ ಬಾಬು ರಾವ್ ಚೇರ ಇವರು ನೇತೃತ್ವ ವಹಿಸಿಕೊಂಡಿದ್ದು ಧಾರ್ಮಿಕ ಕಾರ್ಯಗಳಲ್ಲಿ ಒಂದಾದ ಭಜನಾ ಸೇವೆಯ ಯಶಸ್ವಿಗೆ ಕಾರಣರಾಗಿರುತ್ತಾರೆ. ಈ ಯಶಸ್ಸಿಗೆ ಭಜನಾ ಸಂಘದ ಸರ್ವಸದಸ್ಯರೂ ಭಾಗಿಗಳಾಗಿರುತ್ತಾರೆ.
ನೂರೈವತ್ತು ವರ್ಷಗಳ ಇತಿಹಾಸವಿರುವ ಪೊಳಲಿಯ ಭಜನಾ ಮಂಡಳಿಯನ್ನು ದಿವಂಗತ ಶ್ರೀಯುತ ಬಡಕಬೈಲು ಪರಮೇಶ್ವರಯ್ಯ ಸ್ಥಾಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಪೊಳಲಿ ಭಜನಾ ಮಂಡಳಿಯು ಪ್ರತೀ ವರ್ಷ ದೀಪಾವಳಿಯ ಹುಣ್ಣಿಮೆ ಪಾಡ್ಯದಂದು ಶ್ರೀ ಕ್ಷೇತ್ರದಲ್ಲಿ ನಡೆಯುವ ಅಪ್ಪದ ಪೂಜೆಯ ದಿವಸ ಆಹೋರಾತ್ರಿ ಭಜನಾ ಸೇವೆಯನ್ನು ನಡೆಸುವುದರೊಂದಿಗೆ ಮೂರು ವರ್ಷಕೊಮ್ಮೆ ಸಪ್ತಾಹ ಭಜನೆಯನ್ನು ನಡೆಸಿಕೊಂಡು ಬರುತ್ತಿದೆ. 2017ರಿಂದ ಎರಡು ವರ್ಷ ನಿರಂತರ ದಿನಗಳಲ್ಲಿ ಭಜನೆ ಸೇವೆ ಸಲ್ಲಿಸಿದ ತಂಡಗಳಿಗೆ ಶ್ರೀ ದೇವಳದ ಪರವಾಗಿಯೂ ಭಜನಾ ಮಂಡಳಿಯ ಸರ್ವಸದಸ್ಯರು ಕೃತಜ್ಞತೆಯನ್ನು ಸಲ್ಲಿಸಿ ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ ಎಂದು ಆಶಿಸುತ್ತಾರೆ.
