ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಪೋಷಕ ಸಂಘಟನೆಯಾದ ಎಸ್ಕೆಎಸ್ಸೆಸೆಫ್ ಸಂಸ್ಥೆ “ವಿಜ್ಞಾನ, ವಿನಯ, ಸೇವೆ” ಎಂಬ ಧ್ಯೇಯ ವಾಕ್ಯದೊಂದಿಗೆ ವಿಜಯದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಎಸ್.ಕೆ.ಎಸ್.ಎಸ್.ಎಫ್ ತನ್ನ ಯಶಸ್ವಿ 30 ವಸಂತಗಳನ್ನು ಪೂರೈಸಿ, 4ನೇ ದಶಕದತ್ತ ದಾಪುಗಾಲಿಟ್ಟ ಎಸ್ಕೆಎಸ್ಸೆಸೆಫ್.ಎಸ್ಕೆಎಸ್ಸೆಸೆಫ್ ಕಾಂಜಿಲಕೊಡಿ ಶಾಖೆ ವತಿಯಿಂದ ಬದ್ರುಲ್ ಹುದಾ ಜುಮಾ ಮಸೀದಿ ಕಾಂಜಿಲಕೊಡಿ ವಠಾರದಲ್ಲಿ ಇಂದುಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಬದ್ರುಲ್ ಹುದಾ ಜುಮಾ ಮಸೀದಿ ಕಾಂಜಿಲಕೊಡಿ ಅಧ್ಯಕ್ಷರಾದ ಎಂ.ಎ.ಅಹ್ಮದ್ ಬಾವ ಅಧ್ಯಕ್ಷತೆವಹಿಸಿ ಧ್ವಜಾರೋಹಣ ನೇರವೇರಿಸಿದರು.ಬದ್ರುಲ್ ಹುದಾ ಜುಮಾ ಮಸೀದಿ ಕಾಂಜಿಲಕೊಡಿ ಖತೀಬರಾದ ಉಸ್ತಾದ್ ಅಬ್ದುಲ್ ರಝಕ್ ದಾರಿಮಿ ಪ್ರಾರ್ಥನ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಯುವ ಜನತೆ ಎಸ್ಕೆಎಸ್ಸೆಸೆಫ್ ನಂತಹ ಉತ್ತಮ ಸಂವಹನೆಯೊಂದಿಗೆ ಕೈ ಜೋಡಿಸಿ ಸಮಾಜಮುಕಿ ಕಾರ್ಯ ಚಟುವಟಿಕೆ ಮಾಡಬೇಕೆಂದು ಕರೆ ನೀಡಿದರು ಹಾಗೂ ಪುಲ್ವಾಮಾ ಸಿ.ಆರ್.ಪಿ.ಎಫ್ ಯೋಧರ ಮೇಲೆ ನಡೆದ ಧಾಳಿಯನ್ನು ಖಂಡಿಸಿದರು.
ವೇದಿಕೆಯಲ್ಲಿ ಎಂ.ಹೆಚ್ ಹಾಜಿ ಅಡ್ಡೂರು , ಶಾಖೆಯ ಅಧ್ಯಕ್ಷ ಹಾರಿಸ್ ಕಳಸಗುರಿ,ಮದರಸ ಮುಖ್ಯೋಪಾಧ್ಯಾಯರಾದ
ಮುಹಿದ್ದೀನ್ ಸಹದಿ ಉಸ್ತಾದ್,ಸಿದ್ದಿಕ್ ದಾರಿಮಿ ಅಸೈಗೊಳಿ, ಕಿನ್ಯ, ಮುನೀರ್ ಮುಸ್ಲಿಯಾರ್ ಎಸ್ಕೆಎಸ್ಸೆಸೆಫ್ ದ.ಕ ಜಿಲ್ಲಾ ಕಾರ್ಯದರ್ಶಿ ಎಂ.ಎ.ಮುಹಮ್ಮದ್ ಕುಂಞಿ ಮಾಸ್ಟರ್,
, ಜಮಾಅತ್ ಪ್ರಧಾನ ಕಾರ್ಯದರ್ಶಿ ಂ ಏ ಮುಸ್ತಫಾ, ಒ ಒ ಏ ಆದಂ ಕಳಸಗುರಿ, ಜಮಾಅತ್ ಜೊತೆ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಕಳಸಗುರಿ, ದಾವೂದ್ ಇಮ್ರಾನ್ ಕಳಸಗುರಿ, ಬದ್ರುಲ್ ಹುದಾ ಯಂಗ್ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಹಸನ್ ಪೊನ್ನೆಲ,ಸಂಘಟನಾ ಕಾರ್ಯದರ್ಶಿ ನೌಫಲ್ ಕೊಡಿಬೆಟ್ಟು, ಇಬಾದ್ ಅಬ್ದುಲ್ ಅಝೀಝ್ ಪೊನ್ನೆಲ,ವಿಖಾಯ ಶಾಹುಲ್ ಹಮೀದ್ ನೂಯಿ,ಇಕ್ಬಾಲ್ ಕಾಂಜಿಲಕೋಡಿ,ಸೌರಜ್ ಇಮ್ರಾನ್,ಮುಹಮ್ಮದ್ ಮುಸ್ತಫಾ, ಮದ್ರಸ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಶಾಖೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಸ್ವಾಗತಿಸಿ ವಂದಿಸಿದರು.

