ಕೈಕಂಬ : ಕುಲಾಲ ಸಮಾಜದವರ ಶ್ರೀ ರಾಜರಾಜೇಶ್ವರಿ ಸೇವಾ ಸಮಿತಿ ವತಿಯಿಂದ ಪೊಳಲಿ ಶ್ರೀ ಕ್ಷೇತ್ರದ ಶ್ರೀ ಮಹಾಗಣಪತಿ ಹಾಗೂ ಶ್ರೀ ಭದ್ರಕಾಳಿ ದೇವರ ಗರ್ಭಗುಡಿಯ ಬಾಗಿಲಿನ ದಾರಂದ ಮತ್ತು ಬಾಗಿಲುಗಳಿಗೆ ರಜತ ಹೊದಿಕೆ ಭಾನುವಾರ ಸಮರ್ಪಿಸಲಾಯಿತು.
ಅರ್ಕುಳದ ತುಪ್ಪೆಕಲ್ಲಿನ ಶಿಲ್ಪಿ ಪ್ರಕಾಶ್ ಆಚಾರ್ಯರ ಕಾರ್ಯಾಗಾರದಲ್ಲಿ ನಡೆದ ಸುಮಾರು 27 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ರಜತ ಕವಚವನ್ನು ಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲದ ಪೂಜ್ಯ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ಶ್ರೀ ರವಿ ನಡುಬೊಟ್ಟು ಅವರ ಮಾರ್ಗದರ್ಶನದಲ್ಲಿ ಬಿ.ಸಿ. ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರದಿಂದ ವಾಹನ ಜಾಥಾ-ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಯಿತು.
ಮಾಜಿ ಸಚಿವ ರಮಾನಾಥ ರೈ, ಶ್ರೀ ರಾಜರಾಜೇಶ್ವರಿ ಸೇವಾ ಸಮಿತಿಯ ಗೌರವಾಧ್ಯಕ್ಷ ಆರ್ ಕೆ. ಪೃಥ್ವೀರಾಜ್ ಎಡಪದವು, ಅಧ್ಯಕ್ಷ ಸುಂದರ ಬಿ. ಬಂಗೇರ ಅದ್ಯಪಾಡಿ, ಪ್ರ. ಕಾರ್ಯದರ್ಶಿ ಪ್ರಮೀಳಾ ಎಂ. ಮಾಣೂರು, ಕೋಶಾಧಿಕಾರಿ ಮೋಹನ್ ಮಳಲಿ, ರಾಘವ ಮಳಲಿ, ಉಪಾಧ್ಯಕ್ಷರಾದ ಸುಜೀರ್ ಶ್ರೀಧರ್ ಕುಡುಪು, ದಿವಾಕರ ಪಂಬದಬೆಟ್ಟು, ನಾರಾಯಣ ಸಿ. ಪೆರ್ನೆ, ಯಶೋಧರ ಪೊಳಲಿ ಕಲ್ಕುಟ, ಚಂದ್ರಹಾಸ ಪಲ್ಲಿಪಾಡಿ, ಶಿವಾನಂದ ಮುತ್ತೂರು, ಜೊತೆ ಕಾರ್ಯದರ್ಶಿಗಳಾದ ಭಾರತಿ ಶೇಷಪ್ಪ ತುಂಬೆ, ವಿದ್ಯಾ ಉಮೇಶ್ ಮೂಲ್ಯ, ಗೌರವ ಸಲಹೆಗಾರರಾದ ಸೀತಾರಾಮ ಕುಲಾಲ್ ಮಳಲಿ, ಮಹಾಬಲ ಕುಲಾಲ್, ಸದಾಶಿವ ಬಿಜೈ, ಶಿವಪ್ಪ ಬಂಗೇರ ಅದ್ಯಪಾಡಿ, ಶ್ರೀಧರ ಪಲ್ಲಿಪಾಡಿ, ಟಿ. ಶೇಷಪ್ಪ ಮೂಲ್ಯ ತುಂಬೆ, ಗೋಪಾಲ ಫರಂಗಿಪೇಟೆ ಮೆರವಣಿಗೆಯಲ್ಲಿದ್ದರು.
ಬಿ. ಸಿ. ರೋಡು ಕೈಕಂಬದಿಂದ ವಾಹನದ ಮೂಲಕ ಸಡಗರದಿಂದ ಹೊರಟು ಮೆರವಣಿಗೆ ಪೊಳಲಿಗೆ ಹತ್ತಿರದ ಪುಂಚಮೆಯಿಂದ ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ಸಾಗಿತು. ದೇವಳಕ್ಕೆ ರಚತ ಕವಚ ಒಪ್ಪಿಸಿದ ಸಂದರ್ಭದಲ್ಲಿ ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ರಾಮ ಭಟ್, ವಿಷ್ಣುಮೂರ್ತಿ ನಟ್ಟೋಜ, ಮಾಧವ ಮಯ್ಯ ಇದ್ದರು.
ಚೆಂಡೆ, ಬ್ಯಾಡ್, ಕೀಲುಕುದುರೆ, ಗೊಂಬೆಬಳಗ, ಭಜನೆ ಮೆರವಣಿಗೆಗೆ ಮೆರುಗು ನೀಡಿತು. ಅಲ್ಲಲ್ಲಿ ಪಾನಕದ ವ್ಯವಸ್ಥೆ ಮಾಡಲಾಗಿತ್ತು.ದೇವಳಕ್ಕೆ ರಜತಾ ಕವಚ ತಲುಪಿದಾಗ ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ, ಶಾಸಕ ರಾಜೇಶ್ ನಾಯ್ಕ್, ದೇವಳದ ಮೊಕ್ತೇಸರ ಅಮ್ಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ, ಮೊಕ್ತೇಸರ ಯು. ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಕೃಷ್ಣಕುಮಾರ್ ಪೂಂಜ, ಕೃಷ್ಣರಾಜ ಮಾರ್ಲ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.








