ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲಬಾರಿಗೆ ಶಾಸಕರುಗಳಿಗೆ ಬಜೆಟ್‌ನ ಪ್ರತಿ ನೀಡದೇ ಮುಖ್ಯಮಂತ್ರಿ ಅವರು ಬಜೆಟ್ ಮಂಡಿಸಿದ್ದಾರೆ. ಬಜೆಟ್ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.  ೨ ದಿನಗಳ ಹಿಂದೆಯೇ ಪ್ರತಿಪಕ್ಷದ ನಾಯಕರಾದ ಯಡಿಯೂರಪ್ಪರವರು, ಬಜೆಟ್‌ನ ಪ್ರತಿಯನ್ನು ಶಾಸಕರಿಗೆ ನೀಡಿ ಈ ಹಿಂದಿನ ಸಂಪ್ರದಾಯವನ್ನು ಮುಂದುವರಿಸಬೇಕಲ್ಲದೆ ಬಜೆಟ್ ಮಂಡನೆಗೆ    ಪ್ರತಿಪಕ್ಷವು  ಸಂಪೂರ್ಣ ಸಹಕಾರ ನೀಡುವುದಾಗಿಯೂ ತಿಳಿಸಿದ್ದರು.
IMG-20171030-WA0039
ಆದರೆ, ಬಜೆಟ್ ಮಂಡನೆಗೆ ಮುನ್ನ ಮುಖ್ಯಮಂತ್ರಿ ಅವರು ಪತ್ರಿಕಾಗೋಷ್ಠಿ ಕರೆದು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿ, ಗೊಂದಲವನ್ನು ಸೃಷ್ಠಿಸಿದ್ದಾರೆ. ಆಡಳಿತ ಪಕ್ಷದಲ್ಲಿ ಸಂಖ್ಯಾಬಲ ಕಡಿಮೆಯಿರುವುದರಿಂದ ಸದನದಲ್ಲಿ ಪ್ರತಿಪಕ್ಷಗಳಿರಬಾರದೆಂದು, ಮುಖ್ಯಮಂತ್ರಿಯವರು ಈ ಸುಳ್ಳು ಆರೋಪ ಹೊರಿಸಿ  ಗೊಂದಲ ಸೃಷ್ಠಿಸಿದ್ದಾರೆ.  ಹಾಗಾಗಿ ನಾವು ಸಭಾತ್ಯಾಗ ಮಾಡಿ ಗಾಂಧಿ ಪ್ರತಿಮೆ ಎದುರು  ಧರಣಿ ಕುಳಿತರಿಂದ ಸಂಜೆಯವರೆಗೂ ಬಜೆಟ್‌ನ ಪ್ರತಿ ಸಿಗಲಿಲ್ಲ.
ಯು.ರಾಜೇಶ್ ನಾಯ್ಕ್,  ಶಾಸಕರು ಬಂಟ್ವಾಳ

 

By suddi9

Leave a Reply

Your email address will not be published. Required fields are marked *