ಬಂಟ್ವಾಳ : ಎಸ್ 4  ನಿರ್ಮಾಣ ದಲ್ಲಿ ಮೂಡಿಬರುತ್ತಿರುವ ಕಿರುಚಿತ್ರ “ತುಮುಲ” ಬಿಡುಗಡೆಗೆ ಸಿದ್ಧಗೊಂಡಿದೆ.ರಕ್ತ ಸಂಬಂಧ ದಲ್ಲಿ ಮದುವೆಗಳಾದಾಗ ಉಂಟಾಗುವ ಸಮಸ್ಯೆಯೊಂದನ್ನು ಆಧರಿಸಿದ ಕಥಾವಸ್ತುವನ್ನಾಗಿ ಈ ಕಿರುಚಿತ್ರ ನಿರ್ಮಿಸಲಾಗಿದೆ ಎಂದು ನಿರ್ದೇಶಕ ಶಕ್ತಿಪ್ರಸಾದ್ಅಭ್ಯಂಕರ್ ತಿಳಿಸಿದ್ದಾರೆ.IMG-20190206-WA0012
IMG-20190206-WA0019
 ಮುಖ್ಯ ಪಾತ್ರದಲ್ಲಿ ಕೊಂಕಣಿ ಭಾಷೆಯ ‘ಅಂತು’ ‘ಸಂಸಾರು’ ತುಳುಚಿತ್ರ ‘ದೆಯಿ ಬೈದೆತಿ’ ಹಾಗೂ ಪ್ರಶಸ್ತಿ ವಿಜೇತ ಕಿರುಚಿತ್ರ ‘ಮೌನಮಾತಾದಾಗ’ ಚಿತ್ರದಲ್ಲಿ   ನಟಿಸಿರುವ ಸುಬ್ರಹ್ಮಣ್ಯ ಪೈ ನಟಿಸಿದ್ದಾರೆ.
ಇತರೆ ನಟರಾಗಿ ವಂದಿತ ಕುಡ್ವ, ಕೃತಿ ಕಾರಂತ್ ವೀಣಾ ಪಂಡಿತ್ ಶ್ರುತಿ ಸುವರ್ಣ   ಶಿವಶಂಕರ ಮಯ್ಯ ಅಭಿನಯಿಸಿದ್ದಾರೆ.IMG-20190206-WA0017
IMG-20190206-WA0018ಪಡ್ಡಾಯಿ’ ಖ್ಯಾತಿಯ ಸದಾಶಿವ ನೀನಾಸಂ ಇವರ ನಿರ್ದೇಶನ ಸಹಕಾರವಿದೆ. ತಾಂತ್ರಿಕ ನಿರ್ವಹಣೆ ಬಾಲಸುಬ್ರಹ್ಮಣ್ಯ ನೂಜಿ, ಶಶಿಕುಮಾರ್ ಮತ್ತು ಸತೀಶ್ ಬಿ. ಸಾಹಿತ್ಯ ಅನುಶ್ರೀ ಪುತ್ತೂರಾಯ ಅವರು ಸಹಕರಿಸಿದ್ದು,ಹಲವು ಭಾಷೆಯ ಸಿನಿಮಾಗಳಿಗೆ ಸಂಗೀತ ಸಂಯೋಜಕರಾಗಿರುವ ಯುವ ಗಾಯಕ ನಕುಲ್ ಅಭ್ಯಂಕರ್ ರವರ ಸಂಗೀತವಿದೆ.ಈ ಕಿರುಚಿತ್ರವು ಇದೇ ತಿಂಗಳ 15ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶಕ್ತಿ ಪ್ರಸಾದ್ ಅಭ್ಯಂಕರ್ ಇವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *