ಉಡುಪಿ: ತುಳುನಾಡಿನ ಬಗ್ಗೆ ,ಭೂತಾರಾಧನೆ ವಿಷಯದಲ್ಲಿ ಅಪಾರ ಆಸಕ್ತಿಯುಳ್ಳ, ಸತತ ಪ್ರಯತ್ನದಿಂದ ತುಳುವ ರಾಜಾಧಾನಿ ಬಾರ್ಕೂರಿನಲ್ಲಿ ಆಳುಪೋತ್ಸವ ನಡೆಯಲು ಕಾರಣರಲ್ಲಿ ಒಬ್ಬರಾದ ಶ್ರೀ ಡಾ.ವಿದ್ಯಾವಾಚಾಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರಿಗೆ ಭಾರತ ತೌಳವ ರತ್ನ ಬಿರುದಿನೊಂದಿಗೆ ಸನ್ಮಾನ ಉಡುಪಿ ಜಿಲ್ಲೆಯ ಅಜೆಕಾರಿನಲ್ಲಿ ನಡೆಯಿತು. ಆದಿಗ್ರಾಮೋತ್ಸವ ಹೆಸರಿನ ಹಳ್ಳಿ ಉತ್ಸವದ 20 ನೇ ವರ್ಷದ ಸಂಭ್ರಮಕ್ಕಾಗಿ ಆಯೋಜಿಸಲಾಗಿದ್ದ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ ನಾದವೈಭವಂ ಉಡುಪಿ ವಾಸುದೇವ ಭಟ್, ಕುಗೋ, ಡಾ.ಸಂತೋಷ್ ಕುಮಾರ್, ಉತ್ಸವದ ರೂವಾರಿ ಶೇಖರ ಅಜೆಕಾರು ಸಹಿತ ಗಣ್ಯರು ಸ್ವಾಮಿಜಿ ಅವರನ್ನು ಬಿರುದು ಸಹಿತ ಗೌರವ ನೀಡಿ ಸನ್ಮಾನಿಸಿದರು.barkur swamiji 1
ಸಂಪ್ರದಾಯದ ಹೆಸರಿನಲ್ಲಿ ಮೌಢ್ಯಕ್ಕೆ ಒತ್ತು ನೀಡಿ ಧಾರ್ಮಿಕ ಆಚರಣೆಗಳಲ್ಲಿ ಮೂಡ ನಂಬಿಕೆಗಳ ವೈಭವೀಕರಣ ನಡೆಯುತ್ತಿದ್ದು ಅದು ನಮ್ಮ ಸಂಸ್ಕøತಿ, ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಈ ನಿಟ್ಟಿನಲ್ಲಿ ಜನಸಮುದಾಯ ಎಚ್ಚೆತ್ತು ಕೊಳ್ಳ ಬೇಕಿದೆ ಎಂದು ಗೌರವ ಸ್ವೀಕರಿಸಿದ ಸ್ವಾಮಿಜಿ ಅವರು ಅಭಿಪ್ರಾಯಪಟ್ಟರು.ತುಳುವಿನ ಬಗೆಗೆ ಮಾಡಿದ ಸೇವೆಯನ್ನು ಗುರುತಿಸಿ ತೌಳವ ರತ್ನ ನೀಡುತ್ತಿರುವುದರಿಂದ ಅದೂ ಕೂಡಾ ಒಂದು ಹಳ್ಳಿಯ ಆದಿಗ್ರಾಮೋತ್ಸವದಲ್ಲಿ ಪ್ರದಾನಿಸುತ್ತಿರುವುದರಿಂದ ತುಳು ಭಾಷೆಗೆ ಅಪಚಾರವಾಗ ಬಾರದು ಎಂಬ ದೃಷ್ಟಿಯಿಂದ ಈ ಗೌರವವನ್ನು ಸ್ವೀಕರಿಸಿದೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಪ್ರಸಿದ್ಧವಾಗಿದ್ದರೂ ಇಲ್ಲಿನ ಕೆಲವು ಆಚರಣೆಗಳಲ್ಲಿ ಮೂಢನಂಬಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಉತ್ತರ ಭಾರತದಲ್ಲಿ ಜಾನಪದ ಕಲೆಯಾಗಿರುವ ನಾಗಮಂಡಲಕ್ಕೆ ಇಲ್ಲಿ ಧಾರ್ಮಿಕ ಆಚರಣೆಯ ಪಟ್ಟಕಟ್ಟಿ ಕೋಟಿಗಟ್ಟಳೆ ಹಣ ವ್ಯಯಿಸುತ್ತಿದ್ದಾರೆ. ಕೆಲವೇ ಲಕ್ಷ ರೂಪಾಯಿಗಳಲ್ಲಿ ನಾಗಮಂಡಲ ನಡೆಸಿ ಉಳಿದ ಹಣವನ್ನುನೇರವಾಗಿಸಮಾಜಕ್ಕೆಸಹಾಯಹಸ್ತವಾಗಿ ನೀಡಬಹುದು. ಮಧ್ಯಮ ವರ್ಗದ ಜನರಿಗಾಗಿ ಒಂದು ಹೈಟೆಕ್ ಆಸ್ಪತ್ರೆ ಂದನ್ನು ಸಂಸ್ಥಾನದ ವತಿಯಿಂದ ತೆರೆಯಲಾಗುವುದು ಎಂದು ಅವರು ಸಲಹೆ ನೀಡಿದರು.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಪ್ರೇಮಾ.ವಿ ಸೂರಿಗ, ಗ್ರಾಮೋತ್ಸವ ಸೇವಾ ನಿರತರಾದ ಶಂಕರ ಆಚಾರ್ಯ, ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು, ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್, ಆದಿಗ್ರಾಮೋತ್ಸವ ಸಮತಿಯ ಗೌರವಾಧ್ಯಕ್ಷ ಡಾ. ಸಂತೋಷ ಕುಮಾರ್,ಅಜೆಕಾರು ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ ಎಂ., ಕಾರ್ಕಳ ತಾಲೂಕು ಪಂಚಾಯತ್ ಸದಸ್ಯ ಹರೀಶ ನಾಯಕ್ ಮೊದಲಾದವರು ಅಥಿತಿಗಳಾಗಿ ಇದ್ದರು.

By suddi9

Leave a Reply

Your email address will not be published. Required fields are marked *