ಮೂಡುಬಿದಿರೆ: ಅಂತರಾಷ್ಟ್ರೀಯ ಖ್ಯಾತ ಗಾಯಕ ಹರಿಹರನ್ ಅವರಿಗೆ 2019ರ 25ನೇ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ನೀಡಲಾಯಿತು. 1ಲಕ್ಷ ನಗದು, ಸ್ಮರಣಿಕೆ ಹಾಗೂ ಸನ್ಮಾನ ಪತ್ರ ಪುರಸ್ಕಾರ ಸಹಿತ ನೀಡಿ ಗೌರವಿಸಲಾಯಿತು. ಸಂಗೀತ ಮನಸ್ಸಿಗೆ ಶಾಂತಿ ನೀಡುತ್ತದೆ. ಯೋಗದಿಂದ ಮನಸ್ಸಿಗೆ ಆಗುವ ಪರಿಣಾಮದಂತೆ ಸಂಗೀತವೂ ಪರಿಣಾಮಕಾರಿಯಾಗಿದೆ. ಆಳ್ವಾಸ್ ವಿರಾಸತ್ ಪ್ರಶಸ್ತಿ ಭಾವನಾತ್ಮಕವಾಗಿ ಸ್ವೀಕರಿಸಿ, ಇದು ಒಂದು ನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಹರಿಹರನ್ ಹೇಳಿದರು.

virasath udgatane (2)

virasath udgatane (4)
ನಂತರ ಕೊಲೊನಿಯಲ್ ಕಸಿನ್ಸ್ ಖ್ಯಾತಿಯ ಸಂಗೀತ ಮಾಂತ್ರಿಕ ಹರಿಹರನ್ ಮತ್ತು ಲೆಸ್ಸಿ ಲೇವಿಸ್ ರಸ ಸಂಯೋಗ ಪ್ರಸ್ತುತಪಡಿಸಿದರು. ಆಳ್ವಾಸ್ ವಿರಾಸತ್‍ನ ಮೊದಲ ದಿನ ಯಶಸ್ವಿಯಾಗಿಯಿತು. 24 ವರ್ಷದಿಂದ ಸಂಗೀತ ಪ್ರಯರು ಆಗಮಿಸಿದ್ದು, ಈ ವರ್ಷವು ಹೆಚ್ಚು ಪ್ರೇಕ್ಷಕರು ಸಂಗೀತ ಸಂಜೆಗೆ ಸಾಕ್ಷಿಯಾದರು. ಮೊದಲ ದಿನವೇ 50ಸಾವಿರದಷ್ಟು ಪ್ರೇಕ್ಷಕರು ಪಾಲ್ಗೊಂಡಿದ್ದು, ಜನರನ್ನು ಮಂತ್ರಮುಗ್ಧಗೊಳಿಸಿತು.

virasath udgatane (3)
ಬಳಿಕ ಆಳ್ವಾಸ್ ಸಾಂಸ್ಕøತಿ ವೈಭವ ನಡೆಯಿತು.ಮೋಹಿನಿಯಾಟ್ಟಂ, ದಾಸ ದೀಪಾಂಜಲಿ, ಬಡಗತಿಟ್ಟು ಯಕ್ಷಗಾನ, ಸಾಹಸಮಯ ಮಲ್ಲಕಂಬ, ಗುಜರಾತಿನ ದಾಂಡಿನ ನೃತ್ಯ ವಿಶೇಷ ಆಕರ್ಷಣೆ ನೀಡಿತು.

By suddi9

Leave a Reply

Your email address will not be published. Required fields are marked *